ಜನಸಾಗರದ ಮಧ್ಯೆ ದೀಪಕ್‌ ಚಿತೆಗೆ ಕಿರಿಯ ಸಹೋದರನಿಂದ ಅಗ್ನಿಸ್ಪರ್ಶ

ಮಂಗಳೂರು : ಕಾಟಿಪಳ್ಳಿ ನಿವಾಸಿ ದೀಪಕ್‌ ರಾವ್‌ ಅಂತ್ಯಕ್ರಿಯೆ ಸಾವಿರಾರು ಜನರ ಮಧ್ಯೆ ಪೊಲೀಸರ ಬಿಗಿ ಭದ್ರತೆಯಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ.

ಕಾಟಿಪಳ್ಳಿ ಗ್ರಾಮದಲ್ಲೇ ಮುಕ್ಕಾಲು ಕಿ.ಮೀ ವರೆಗೂ ದೀಪಕ್‌ ಶವಯಾತ್ರೆ ನಡೆಸಲು ಪೊಲೀಸರು ಅನುಮತಿ ನೀಡಿದ್ದು, ಇದರಂತೆ ಶವಯಾತ್ರೆ ನಡೆಸಿ, ಸೂರತ್ಕಲ್‌ನ ಗಣೇಶಕಟ್ಟೆ ರುದ್ರಭೂಮಿಯಲ್ಲಿ ಶಿವಾಜಿ ಕ್ಷತ್ರಿಯ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ದೀಪಕ್‌ ಅವರ ಕಿರಿಯ ಸಹೋದರ ಸತೀಶ್‌, ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ದೀಪಕ್‌ ಕೊಲೆ ಬಳಿಕ ಸೂರತ್ಕಲ್‌ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಹಲವೆಡೆ ಕಲ್ಲು ತೂರಾಟ, ಹಲ್ಲೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಎಜೆ ಆಸ್ಪತ್ರೆಯಿಂದ ದೀಪಕ್‌ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಯಾರಿಗೂ ತಿಳಿಯದಂತೆ ಸ್ವಗ್ರಾಮಕ್ಕೆ ತರಲಾಗಿತ್ತುಯ ಆದರೆ ಪೊಲೀಸರ ಈ ಕೆಲಸಕ್ಕೆ ಪೋಷಕರೂ ಆಕ್ರೋಶ ವ್ಯಕ್ತಪಡಿಸಿದ್ದು. ಶವಯಾತ್ರೆ ಮಾಡಲು ಅವಕಾಶಕ್ಕಾಗಿ ಆಗ್ರಹಿಸಿದ್ದರು. ಬಳಿಕ ಜಿಲ್ಲಾಧಿಕಾರಿ ಸೆಂಥಿಲ್‌, ಗ್ರಾಮದಲ್ಲೇ ಶವಯಾತ್ರೆಗೆ ಅವಕಾಶ ಮಾಡಿಕೊಡುವುದರ ಜೊತೆಗೆ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಬಳಿಕ ಪರಿಸ್ಥಿತಿ ಶಾಂತವಾಯಿತು.

Leave a Reply

Your email address will not be published.