ಭಾರತದ ಬಗ್ಗೆ ಕುಲಭೂಷಣ್ ಜಾದವ್ ಹೇಳಿದ್ದೇನು : ಮತ್ತೊಂದು ವಿಡಿಯೊ ರಿಲೀಸ್‌ ಮಾಡಿದ PAK

ಇಸ್ಲಾಮಾಬಾದ್‌ : ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಜಾದವ್‌ ಕುಟುಂಬವನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದ ಪಾಕಿಸ್ತಾನ ಈಗ ಮತ್ತೊಂದು ಕಥೆ ಕಟ್ಟಲು ಹೊರಟಿದ್ದು,  ಜಾದವ್‌ ಅವರ ಹೇಳಿಕೆಯಿರುವ ವಿಡಿಯೊವೊಂದನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.
ಈ ವಿಡಿಯೊದಲ್ಲಿ ಜಾದವ್‌ ಭಾರತದ ವಿರುದ್ದ ಮಾತನಾಡಿದ್ದು, ನಾನು ಪಾಕಿಸ್ತಾನ ಜೈಲಿನಲ್ಲಿ ಯಾವುದೇ ಶಿಕ್ಷೆ ಅನುಭವಿಸುತ್ತಿಲ್ಲ. ನಾನು ಭಾರತೀಯ ನೌಕಾದಳದ ಅಧಿಕಾರಿಯಾಗಿದ್ದೇನೆ. ನನ್ನ ವೃತ್ತಿಯ ಬಗ್ಗೆ ಭಾರತ ಯಾಕೆ ಸುಳ್ಳು ಹೇಳುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ, ಇತ್ತೀಚೆಗೆ ಜಾದವ್ ತಾಯಿ ಹಾಗೂ ಪತ್ನಿ ಜಾದವ್ ಅವರನ್ನು ಭೇಟಿಯಾಗಿದ್ದರ ಕುರಿತು ಹೇಳಿಕೆ ನೀಡಿರುವ ಜಾದವ್‌, ಭೇಟಿ ವೇಳೆ ಭಾರತೀಯ ಅಧಿಕಾರಿಗಳು ನನ್ನ ತಾಯಿ ಹಾಗೂ ಪತ್ನಿಗೆ ಬೆದರಿಸಿದ್ದಾರೆ. ಅವರಿಬ್ಬರ ಮೇಲೆ ಚೀರಾಡುತ್ತಿದ್ದುದನ್ನು ನಾನೇ ಕೇಳಿದ್ದೇನೆ. ನನ್ನ ತಾಯಿಯನ್ನು ಥಳಿಸಿ ಬಳಿಕ ವಿಮಾನದಲ್ಲಿ ಕರೆತಂದಿದ್ದರೇ, ಉತ್ತರಿಸಿ ಎಂದು ಜಾದವ್‌ ಪ್ರಶ್ನಿಸಿದ್ದಾರೆ.
 ನನ್ನನ್ನು ನೋಡಿ ನನ್ನ ತಾಯಿ ಬಹಳ ಸಂತೋಷಪಟ್ಟರು. ನಿನ್ನನ್ನು ನೋಡಿದ ಮೇಲೆ ನನಗೆ ನಿರಾಳವಾಯಿತು ಎಂದರು. ಆದರೂ ಅವರ ಕಣ್ಣಲ್ಲಿ ನನಗೆ ಭಯ ಕಾಣುತ್ತಿತ್ತು ಎಂದಿದ್ದಾರೆ. ಜೊತೆಗೆ ಇದು ನನ್ನ ಸ್ವಂತ ಹೇಳಿಕೆ. ಪಾಕಿಸ್ತಾನದ ಅಧಿಕಾರಿಗಳ ಟಾರ್ಚರ್‌ನಿಂದ ನಾನು ಈ ಹೇಳಿಕೆ ನೀಡುತ್ತಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com