ಬಳ್ಳಾರಿ : ಡ್ರಾಪ್ ಕೊಡುವ ನೆಪದಲ್ಲಿ ಮಗು ಅಪಹರಣ ಪ್ರಕರಣ ಸುಖಾಂತ್ಯ

ಡ್ರಾಪ್ ಕೊಡುವ ನೆಪದಲ್ಲಿ ಮಗುವನ್ನು ಅಪಹರಣ ಮಾಡಿದ ಪ್ರಕರಣ ಸದ್ಯ ಸುಖ್ಯಾಂತ ಕಂಡಿದೆ. ಮಗು ಆಂಧ್ರಪ್ರದೇಶದ ಓಬಳಾಪುರಂ ಗ್ರಾಮದಲ್ಲಿ ಪತ್ತೆಯಾಗಿದ್ದು, ಆಂಧ್ರದ ಡಿ ಹಿರೇಹಾಳ್ ಪೋಲಿಸ್ ರ ಬಳಿ ಸುರಕ್ಷಿತವಾಗಿದ್ದಾಳೆ.

ಬಳ್ಳಾರಿ ತಾಲೂಕಿನ ಸಿರಿವಾರ ಗ್ರಾಮದ ಜೀವನ್ ಮತ್ತು ಸುನೀತ ದಂಪತಿಗಳ ೬ ವರ್ಷದ ಮಗು ನಿಹಾರಿಕಾ ಕಪ್ಪಗಲ್ ಗ್ರಾಮದಿಂದ ಸಿರಿವಾರಕ್ಕೆ ಶಾಲೆಯಿಂದ ಮನೆಗೆ ವಾಪಾಸ್ ಆಗುವ ವೇಳೆ, ಅವಳನ್ನು ಬೈಕ್ ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಅಪರಿಚಿತ ವ್ಯಕ್ತಿ ಅಪಹರಣ ಮಾಡಿದ್ದ. ತನ್ನ ಬೈಕ್ ಮೇಲೆ ಕೂಡಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲೂ ಸಹ ಸೆರೆಯಾಗಿತ್ತು.

ಮಗು ಮನೆಗೆ ಬಾರದ ಹಿನ್ನಲೆ ಗಾಬರಿಗೊಂಡ ಪೊಷಕರು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಪ್ರಾರಂಭಿಸಿದ ಪೊಲೀಸರು ಸುತ್ತಮುತ್ತ ಜಿಲ್ಲೆಯ ಪೊಲೀಸ್ ಠಾಣೆಗಳಿಗೂ ಸಹ ಮಾಹಿತಿ ರವಾನೆ ಮಾಡಿದ್ದರು ಮತ್ತು ನಿಹಾರಿಕಾಳ ಭಾವಚಿತ್ರ ಸಹ ಕಳಿಸಿದ್ದರು.

ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಓಬಳಾಪುರಂ ಗ್ರಾಮದಲ್ಲಿ ಮಗು ಇರುವುದು ಪತ್ತೆಯಾಗಿದ್ದು, ಸದ್ಯ ಡಿ.ಹಿರೇಹಾಳ್ ಪೊಲೀಸ್ ಠಾಣೆಯ ಸಿಬ್ಬಂದಿಯ ಕೈಸೇರಿದೆ, ಇನ್ನೂ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ಮತ್ತು ಪೊಷಕರು ಓಬಳಾಪುರಂ ಕಡೆ ಪ್ರಯಾಣ ಬೆಳೆಸಿದ್ದಾರೆ. ಮಗು ಸುರಕ್ಷಿತವಾಗಿದೆ, ಮಗು ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಬಳ್ಳಾರಿ ಗ್ರಾಮೀಣ ಠಾಣೆಯ ಪಿಎಸ್ಐ ಚಿತ್ತರಂಜನ್ ತಿಳಿಸಿದ್ದಾರೆ.

 

Leave a Reply

Your email address will not be published.