ಮೇವು ಹಗರಣ : ಲಾಲೂ ಕಡೆಯವನಿಂದ ನನಗೆ ಕರೆ ಬಂದಿತ್ತು ಎಂದ ಜಡ್ಜ್‌ : ತೀರ್ಪು ಮುಂದೂಡಿಕೆ

ದೆಹಲಿ : ಬಹುಕೋಟಿ ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿರುವ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್‌ ಯಾದವ್‌ ಅವರ ಬೆಂಬಲಿಗನೊಬ್ಬನಿಂದ ತಮಗೆ ಕರೆ ಬಂದಿತ್ತು ಎಂದು ಎರಡನೇ ಬಾರಿ ಶಿಕ್ಷೆ ಪ್ರಮಾಣದ ತೀರ್ಪನ್ನು ಸಿಬಿಐ ನ್ಯಾಯಾಲಯ ಮುಂದೂಡಿದೆ.

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್‌ ಸಿಂಗ್‌, ಲಾಲೂ ಪ್ರಸಾದ್‌ ಕಡೆಯ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿದ್ದರು ಎಂದಿದ್ದು, ಆ ವ್ಯಕ್ತಿ ಏನು ಹೇಳಿದ್ದಾವೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ನಿಮ್ಮ ಕಡೆಯವರಿಂದ ನನಗೆ ಅನೇಕ ಬಾರಿ ಕರೆ ಬಂದಿದೆ. ಈ ಬಗ್ಗೆ ಚಿಂತೆ ಬೇಡ. ನಾನು ಪಾಲಿಸುವುದು ಕಾನೂನನ್ನು ಮಾತ್ರ ಎಂದಿದ್ದಾರೆ.
 ಮೇವು ಹಗರಣ ಸಂಬಂಧ ಆರು ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಲಾಲೂ ಸೇರಿದಂತೆ 15 ಆರೋಪಿಗಳನ್ನು ದೋಷಿ ಎಂದು ರಾಂಚಿ ಸಿಬಿಐ ವಿಶೇಷ ನ್ಯಾಯಾಲಯ ಡಿ.23ರಂದು ತೀರ್ಪು ನೀಡಿತ್ತು. ಅಲ್ಲದೆ ಶಿಕ್ಷೆಯ ಪ್ರಮಾಣವನ್ನು ಜನವರಿ 3ಕ್ಕೆ ಕಾಯ್ದಿರಿಸಿತ್ತು. ಆದರೆ ಇಂದು ಎರಡನೇ ಬಾರಿಗೆ ತೀರ್ಪನ್ನು ಮುಂದೂಡಿದೆ.

 

Leave a Reply

Your email address will not be published.

Social Media Auto Publish Powered By : XYZScripts.com