Cricket – IPL 11 : ಫ್ರಾಂಚೈಸಿಗಳು Retain ಮಾಡಿಕೊಂಡ ಆಟಗಾರರು ಯಾರು..? ಇಲ್ಲಿದೆ ವಿವರ

ಐಪಿಎಲ್ ಸೀಸನ್ 11 ರ ಆಟಗಾರರ ಹರಾಜು ಪ್ರಕ್ರಿಯೆ ಜನೆವರಿ 27 ರಂದು ನಡೆಯಲಿದ್ದು, ಅದಕ್ಕೂ ಮುನ್ನ ಎಲ್ಲ ಫ್ರಾಂಚೈಸಿಗಳು ಯಾವ ಆಟಗಾರರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲಿದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರನ್ನು ಉಳಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ, ಸ್ಫೋಟಕ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ ರನ್ನು ಕೈ ಬಿಟ್ಟು ಸರ್ಫರಾಜ್ ಖಾನ್ ಅವರನ್ನು ರಿಟೇನ್ ಮಾಡಿಕೊಂಡು ಅಚ್ಚರಿ ಮೂಡಿಸಿದೆ. ಆದರೆ ಹರಾಜಿನ ವೇಳೆಯಲ್ಲಿ RTM (Right To Match card ) ಹಕ್ಕನ್ನು ಬಳಸಿ ಮರಳಿ ಪಡೆದುಕೊಳ್ಳಬಹುದಾಗಿದೆ.

ಇಲ್ಲಿದೆ ರಿಟೇನ್ ಮಾಡಿಕೊಳ್ಳಲಾಗಿರುವ ಆಟಗಾರರ ಫುಲ್ ಡೀಟೇಲ್ಸ್..

ಚೆನ್ನೈ ಸೂಪರ್ ಕಿಂಗ್ಸ್ – ಮಹೇಂದ್ರ ಸಿಂಗ್ ಧೋನಿ (15 ಕೋಟಿ), ಸುರೇಶ್ ರೈನಾ (11 ಕೋಟಿ), ರವೀಂದ್ರ ಜಡೇಜಾ (7 ಕೋಟಿ)

ಕೋಲ್ಕತಾ ನೈಟ್ ರೈಡರ್ಸ್ – ಸುನಿಲ್ ನರೈನ್ (8.5), ಆ್ಯಂಡ್ರೆ ರಸೆಲ್ (7)

ರಾಯಲ್ ಚಾಲೆಂಜರ್ಸ್ ಬೆಂಗಳೂರು – ವಿರಾಟ್ ಕೊಹ್ಲಿ (17), ಎಬಿ ಡಿವಿಲಿಯರ್ಸ್ (11), ಸರ್ಫರಾಜ್ ಖಾನ್ (1.5)

ಮುಂಬೈ ಇಂಡಿಯನ್ಸ್ – ರೋಹಿತ್ ಶರ್ಮಾ (15), ಹಾರ್ದಿಕ್ ಪಾಂಡ್ಯ (11), ಜಸ್ಪ್ರೀತ್ ಬುಮ್ರಾ (7)

ಡೆಲ್ಲಿ ಡೇರ್ ಡೆವಿಲ್ಸ್ – ರಿಷಭ್ ಪಂತ್ (8), ಶ್ರೇಯಸ್ ಅಯ್ಯರ್ (7), ಕ್ರಿಸ್ ಮಾರಿಸ್ (7.1)

ಕಿಂಗ್ಸ್ 11 ಪಂಜಾಬ್ – ಅಕ್ಸರ್ ಪಟೇಲ್ (6.75)

ರಾಜಸ್ಥಾನ ರಾಯಲ್ಸ್ – ಸ್ಟೀವ್ ಸ್ಮಿತ್ (12)

ಸನ್ ರೈಸರ್ಸ್ ಹೈದ್ರಾಬಾದ್ : ಡೇವಿಡ್ ವಾರ್ನರ್ (12), ಭುವನೇಶ್ವರ್ ಕುಮಾರ್ (8.5)

Leave a Reply

Your email address will not be published.

Social Media Auto Publish Powered By : XYZScripts.com