Cricket : ಶಾಪ ಮುಕ್ತವಾದ ಬಿಹಾರ : ರಣಜಿಯಲ್ಲಿ ಅವಕಾಶ ನೀಡಲು BCCI ಗೆ ಸುಪ್ರೀಂ ಆದೇಶ

ಬಿಹಾರ ಕ್ರಿಕೆಟ್ ತಂಡಕ್ಕೆ ರಣಜಿ ಟ್ರೋಫಿ ಹಾಗೂ ಇತರ ದೇಶಿಯ ಟೂರ್ನಿಗಳಲ್ಲಿ ಆಡಲು ಅವಕಾಶ ನಿಡುವಂತೆ ಗುರುವಾರ ಸುಪ್ರೀಂ ಕೋರ್ಟ್ BCCI ಗೆ ಆದೇಶಿಸಿದೆ. ಇದಕ್ಕೂ ಮುಂಚೆ ಬಿಹಾರ 2003-04 ರಲ್ಲಿ ರಣಜಿ ಟೂರ್ನಿಯಲ್ಲಿ ಭಾಗವಹಿಸಿತ್ತು.

ಬಿಹಾರ ಕ್ರಿಕೆಟ್ ಅಸೋಸಿಯೇಶನ್ ಕಾರ್ಯದರ್ಶೀಯಾಗಿರುವ ಆದಿತ್ಯ ವರ್ಮಾ ಅವರು ಬಿಹಾರ ತಂಡಕ್ಕೆ ಅವಕಾಶ ನೀಡಬೇಕೆಂದು ವಿನಂತಿಸಿಕೊಂಡು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದಿತ್ಯ ವರ್ಮಾ ಅವರ 2 ವರ್ಷಗಳ ನಿರಂತರ ಪ್ರಯತ್ನಕ್ಕೆ ಕೊನೆಗೂ ಜಯ ಸಂದಿದೆ.

ಬಿಹಾರ ಕ್ರಿಕೆಟ್ ಬೋರ್ಡ್ BCCI ನ ಪೂರ್ಣಾವಧಿಯ ಸದಸ್ಯ ಆಗಿರದ ಕಾರಣಕ್ಕೆ ರಣಜಿ ಟ್ರೋಫಿ ಆಡುವ ಅವಕಾಶವನ್ನು ನಿರ್ಬಂಧಿಸಲಾಗಿತ್ತು. ಸುಪ್ರಿಂ ಕೋರ್ಟ್ 2016 ಜುಲೈನಲ್ಲಿ ಲೋಧಾ ಕಮೀಟಿಯ ಶಿಫಾರಸ್ಸಿನ ಆಧರಿಸಿ ಬಿಹಾರ ಕ್ರಿಕೆಟ್ ಬೋರ್ಡ್, ಬಿಸಿಸಿಐನ ಪೂರ್ಣಾವಧಿ ಸದಸ್ಯ ಎಂದು ತೀರ್ಪು ನೀಡಿತ್ತು.

 

Leave a Reply

Your email address will not be published.

Social Media Auto Publish Powered By : XYZScripts.com