ನನ್ನ ಕ್ಷೇತ್ರದ ಸುದ್ದಿಗೆ ಬಂದರೆ ಪೊರಕೆ ಸೇವೆ ಮಾಡಿಸ್ತೇನೆ : ಡಿಕೆಶಿಗೆ BJP ಮುಖಂಡನ Warning

ಚನ್ನಪಟ್ಟಣ : ಡಿಕೆ ಸಹೋದರರು ತಮ್ಮ ದ್ವೇಷವನ್ನು ಬಹಿರಂಗವಾಗಿ ಸಾಬೀತು ಮಾಡಿದ್ದಾರೆ. ನಾನು ಕೇವಲ ಚನ್ನಪಟ್ಟಣಕ್ಕೆ ಮಾತ್ರ ಸೀಮಿತವಾಗುವಂತೆ ತಂತ್ರ ಮಾಡುತ್ತಿದ್ದಾರೆ. ಇವರಿಬ್ಬರು ನನ್ನ ರಾಜಕೀಯ ವೈರಿಗಳು ಎಂದು ಬಿಜೆಪಿಯ ಸಿ.ಪಿ ಯೋಗೇಶ್ವರ್‌ ಗುಡುಗಿದ್ದಾರೆ.

ಚೆನ್ನಪಟ್ಟಣದಲ್ಲಿಂದುೃ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್‌, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ವಿಸ್ತರಿಸುತ್ತೇವೆ. ಇದರಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಕ್ಕೆ ಹೊಡೆತ ಬೀಳಲಿದೆ. ಇದೇ ರೀತಿ ಡಿಕೆಶಿ ಹದ್ದು ಮೀರಿ ಮುಂದುವರಿದರೆ ನಮ್ಮ ಕ್ಷೇತ್ರದ ಹೆಣ್ಣು ಮಕ್ಕಳಿಂದ ಪೊರಕೆ ಸೇವೆ ಮಾಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಡಿಕೆಶಿ ಹೊಟ್ಟೆಗೇನು ತಿನ್ನುತ್ತಾರೆ. ಅವರ ದರ್ಪ ಇದ್ದರೆ ಅದು ಕನಕಪುರದಲ್ಲಿ ಮಾತ್ರ. ಅದನ್ನು ಬಿಟ್ಟು ನಮ್ಮ ಕ್ಷೇತ್ರಕ್ಕೆ ಬಂದರೆ ಜನರಿಂದ ಪಾಠ ಕಲಿಸುತ್ತೇನೆ ಎಂದಿದ್ದಾರೆ. ಅಲ್ಲದೆ ಚೆನ್ನಪಟ್ಟಣವನ್ನು ರಾಜಕೀಯವಾಗಿ ಮದುವೆಯಾಗಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ. ಇವರು ಚೆನ್ನಪಟ್ಟಣದ ಯಾವ ಹೆಣ್ಣನ್ನು ಮದುವೆಯಾಗಿದ್ದಾರೆ ಎಂಬ ಅನುಮಾನ ಇದೆ. ಇದಕ್ಕೆ ಅವರೇ ಸ್ಪಷ್ಟೀಕರಣ ನೀಡಬೇಕು. ಇಲ್ಲವಾದಲ್ಲಿ ಅದು ಬೇರೆಯದೇ ಅರ್ಥ ಪಡೆಯುತ್ತದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com