ಫ್ಯಾನ್ ಜೊತೆಗಿನ Selfie ಕೊಹ್ಲಿ ಆದರ್ಶ ಪತಿಯೆಂದು Prove ಮಾಡಿದ್ದು ಹೇಗೆ..?

ಜನೆವರಿ 5 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ತಯರಾಗುತ್ತಿರುವ ಟೀಮ್ ಇಂಡಿಯಾ ಆಟಗಾರರು ನೆಟ್ಸ್ ನಲ್ಲಿ ಬೆವರು ಹರಿಸುತ್ತಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ನೆಟ್ಸ್ ನಲ್ಲಿ ಅಭ್ಯಾಸ ನಡೆಸಿದ್ದಾರೆ. ಈ ಸಮಯದಲ್ಲಿ ಅಭಿಮಾನಿಯೊಬ್ಬನ ಜೊತೆಗೆ ತೆಗೆಸಿಕೊಂಡ ಸೆಲ್ಫೀ ಈಗ ವೈರಲ್ ಆಗಿದೆ.

ವಿಶೇಷವೇನೆಂದರೆ, ವಿರಾಟ್ ಕೊಹ್ಲಿ ತಮ್ಮ ಮದುವೆ ಉಂಗುರುವನ್ನು ಕೊರಳಲ್ಲಿ ಧರಿಸಿರುವುದು ಈ ಚಿತ್ರದಲ್ಲಿ ಸೆರೆಯಾಗಿದೆ. ಕೊಹ್ಲಿಯ ಅಭಿಮಾನಿಯೊಬ್ಬರ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಈ ಸೆಲ್ಫೀಯನ್ನು ಪೋಸ್ಟ್ ಮಾಡಲಾಗಿದ್ದು, HUSBAND GOALS ❤ Virat wears his wedding ring on neck with a chain whenever out for a practice session. The husband Virat Kohli is inevitably Goals.  ಎಂದು ಬರೆಯಲಾಗಿದೆ. ನೆಟ್ ಪ್ರಾಕ್ಟೀಸ್ ಮಾಡುವಾಗಲೆಲ್ಲ ಕೊಹ್ಲಿ ಕೈ ಬೆರಳಿನ ಉಂಗುರುವನ್ನು ಕೊರಳಲ್ಲಿ ಧರಿಸುತ್ತಾರೆ.

ಒಬ್ಬ ಆದರ್ಶಪತಿಯಾದವನು ಹೇಗಿರಬೇಕೆನ್ನುವುದಕ್ಕೆ ವಿರಾಟ್ ಕೊಹ್ಲಿ ಅತ್ಯುತ್ತಮ ಉದಾಹರಣೆ ಎಂದು ಕೆಲವು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com