Vijayapuraದಲ್ಲಿ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ರಂತೆ ಕಿಚ್ಚ ಸುದೀಪ್‌…….ಯಾಕೆ ?

ವಿಜಯಪುರ : ಜಾತಿ ಪ್ರಮಾಣ ಪತ್ರಕ್ಕೆ ಕಿಚ್ಚ ಸುದೀಪ್ ಫೋಟೋ ಹಾಕಿ ಸಿದ್ದಲಿಂಗಪ್ಪ ಎಂಬುವವರು ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಉಪ ತಹಶೀಲ್ದಾರ್‌ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸಿದ್ದಲಿಂಗಪ್ಪ ಕೋಳೂರ ಎಂಬ ಹೆಸರಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಕಿಚ್ಚ ಸುದೀಪ್‌ ಅವರ ಫೋಟೋ ಹಾಕಲಾಗಿದೆ. ಪರಿಶೀಲನೆ ನಡೆಸಿದ ಬಳಿಕ ತಮ್ಮ ಫೋಟೋದ ಬದಲಾಗಿ ಸುದೀಪ್ ಅವರ ಫೋಟೋ ಬಳಸಿರುವುದು ತಿಳಿದುಬಂದಿದೆ.

ಸಿದ್ದಲಿಂಗಪ್ಪ ಕೋಳೂರ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಅರ್ಜಿದಾರರ ಫೋಟೋ ಅಗತ್ಯವಾಗಿ ಅಂಟಿಸಬೇಕೆಂಬ ನಿಯಮವಿದೆ. ಆದರೆ ಅರ್ಜಿಗಳನ್ನು ಡೌನ್‌ಲೋಡ್‌ ಮಾಡಿ ನೋಡಿದಾಗ ಸುದೀಪ್‌ ಅವರ ಫೋಟೋ ಕಂಡು ಬಂದಿದೆ. ಬಳಿಕ ಇದನ್ನು ಪರಿಶೀಲಿಸಲಾಗಿದೆ.

ಸಿದ್ದಲಿಂಗಪಪ ಅವರು ನಾಗಬೇನಾಳದಲ್ಲಿ ಹೊಸದಾಗಿ ಸಾಮಾನ್ಯ ಸೇವಾ ಕೇಂದ್ರವನ್ನು ಪ್ರಾರಂಭಿಸಿದ್ದು, ತಾವೇ ಅರ್ಜಿ ಸಿದ್ಧಪಡಿಸಿದ್ದರು. ಅದಕ್ಕೆ ಬೇಕಾದ ನಮೂನೆಯಲ್ಲಿ ಜಾತಿ ಪ್ರಮಾಣ ಪತ್ರವನ್ನೂ ಸಿದ್ಧಪಡಿಸಿದ್ದರುಯ ಬಳಿತ ತಾವೇ ಅದಕ್ಕೆ ಫೋಟೋ ಹಾಕುವ ವೇಳೆ ಸುದೀಪ್‌ ಅವರ ಫೋಟೋ ಹಾಕಿ ಯಡವಟ್ಟು ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com