ಮಿಥಾಲಿ ರಾಜ್ ಪುರುಷರ ತಂಡಕ್ಕೆ ಕೋಚ್ ಆಗಬೇಕು : ಶಾರುಖ್ ಖಾನ್

ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ‘ಟೆಡ್ ಟಾಕ್ಸ್ ಇಂಡಿಯಾ : ನಯೀ ಸೋಚ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ ಮಿಥಾಲಿ ರಾಜ್ ಅವರು ಮುಂದೊಂದು ದಿನ ಭಾರತದ ಪುರುಷರ ತಂಡದ ಕೋಚ್ ಆಗುವುದನ್ನು ನೋಡಲು ಬಯಸುತ್ತೇನೆ ‘ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಹೇಳಿದ್ದಾರೆ. ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಿಂಗ್ ಖಾನ್ ಈ ಮಾತನ್ನು ಹೇಳಿದ್ದಾರೆ. ಶಾರುಖ್ ಅವರ ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಮಿಥಾಲಿ ರಾಜ್, ‘ I always want to give my best ‘ ಎಂದು ಹೇಳಿದ್ದಾರೆ.

ಮಹಿಳಾ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಎಂದೇ ಖ್ಯಾತರಾಗಿರುವ 36 ವರ್ಷದ ಮಿಥಾಲಿ ರಾಜ್, ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ 6000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕಳೆದ ವರ್ಷ ನಡೆದ ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ ಮಿಥಾಲಿ ನೇತೃತ್ವದ ಭಾರತ ತಂಡ ಫೈನಲ್ ತಲುಪಿದ ಸಾಧನೆ ಮಾಡಿತ್ತು.

 

 

Leave a Reply

Your email address will not be published.