ಹಾಸಿಗೆಯಲ್ಲಿ ಮೂತ್ರ ಮಾಡಿದ ಮಗಳಿಗೆ ಹೆತ್ತಪ್ಪ ಇಂಥಾ ಶಿಕ್ಷೆ ನೀಡೋದಾ…..?

ಹೈದರಾಬಾದ್‌ : ಮಗಳು ಹಾಸಿಗೆಯಲ್ಲಿ ಮೂತ್ರ ಮಾಡಿದಳು ಎಂಬ ಕಾರಣಕ್ಕೆ ಹೆತ್ತಪ್ಪನ ತನ್ನ 8 ವರ್ಷದ ಬಾಲಕಿಗೆ ಬಿಸಿ ಚಮಚದಲ್ಲಿ ಸುಟ್ಟ ಮನಕಲಕುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಮಗು ರಾತ್ರಿ ಮಲಗಿದ್ದಾಗ ಹಾಸಿಗೆಯಲ್ಲೇ ಮೂತ್ರ ಮಾಡಿದೆ. ಇದರಿಂದ ಸಿಟ್ಟಿಗೆದ್ದ ತಂದೆ ರಾಜು ಮಗುವಿನ ದೇಹದ ಮೇಲೆ ಬಿಸಿ ಚಮಚದಿಂದ ಸುಟ್ಟಿದ್ದಾನೆ. ಮಗುವಿನ ದೇಹದ ಅನೇಕ ಕಡೆ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಜನವರಿ 1ರಂದು ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಈ ಕುರಿತು ಎನ್‌ಜಿಒ ದೂರು ನೀಡಿದ್ದು, ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

Leave a Reply

Your email address will not be published.