WATCH : ಮಿಗ್‌ ಏರ್‌ ಕ್ರಾಫ್ಟ್‌ನಲ್ಲಿ ಬೆಂಕಿ : ಸ್ತಬ್ದವಾಯ್ತು ಗೋವಾ ವಿಮಾನ ನಿಲ್ದಾಣದ Run Way

ಪಣಜಿ : ರನ್‌ವೇಯಿಂದ ಹೊರ ಹೋದ ಪರಿಣಾಮ ಮಿಗ್-29ಕೆ ಯುದ್ಧ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಉಂಟಾದ ಘಟನೆ ಗೋವಾದ ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಘಟನೆಯಿಂದಾಗಿ ರನ್‌ವೇಯನ್ನು ಒಂದು ಗಂಟೆಯ ಕಾಲ ಬಂದ್ ಮಾಡಲಾಗಿತ್ತು ಎಂದು ಏರ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧ ವಿಮಾನವನ್ನು ಟ್ರೈನಿ ಪೈಲಟ್‌ ನಿರ್ವಹಿಸುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ. ಬೆಂಕಿ ಹೊತ್ತುತ್ತಿದಂತೆ ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು,  ವಿಮಾನದಲ್ಲಿನ ಬೆಂಕಿಯನ್ನು ನಂದಿಸಲಾಗಿದೆ. ಪೈಲೆಟ್ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com