BIGG BOSS : ಬಿಕ್ಕಿ ಬಿಕ್ಕಿ ಅತ್ತ ಬಾರ್ಬಿ ಡಾಲ್‌ ನಿವೇದಿತಾ….ಕಾರಣ ಏನು ?

ಬಿಗ್‌ಬಾಸ್‌ನಲ್ಲಿ ಸ್ಪರ್ಧಿ ನಿವೇದಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಹೌದು….ಮನೆಯಲ್ಲಿ ಜಯಶ್ರೀನಿವಾಸನ್‌ ವಿಚಾರವಾಗಿ ಚಂದನ್‌, ನಿವೇದಿತಾ, ರಿಯಾಜ್‌ ಹಾಗೂ ಸಮೀರಾಚಾರ್ಯ ಮಧ್ಯೆ ಚರ್ಚೆ ನಡೆದಿದೆ. ಪ್ರತಿಯೊಂದಕ್ಕೂ ಸಂಖ್ಯಾಶಾಸ್ತ್ರವನ್ನು ಅನ್ವಯಿಸುತ್ತಿದುದರ ಬಗ್ಗೆ ಚಂದನ್‌ ವ್ಯಂಗ್ಯ ಮಾಡಿದ್ದಾರೆ.

ಈ ವೇಳೆ ಜೆಕೆ ನಾನು ಈ ವಾರ ಮನೆಯಿಂದ ಹೊರಹೋಗಲಿದ್ದೇನೆ ಎಂದಿದ್ದು, ಇದಕ್ಕೆ ಸಮೀರಾಚಾರ್ಯ ಓಗೊಟ್ಟಿದ್ದಾರೆ. ಇಬ್ಬರ ಮಧ್ಯೆ ಚರ್ಚೆ ನಡೆದು ಬೆಟ್ಟಿಂಗ್‌ ಕಟ್ಟಿದ್ದಾರೆ. ಈ ಮಧ್ಯೆ ಮಾತನಾಡಿದ ನಿವೇದಿತಾ ಯಾರು ಏನಾದ್ರು ಆಗಲಿ ನಾನು ಟಾಪ್‌ 5ನಲ್ಲಿ ಒಬ್ಬಳಾಗಿರುತ್ತೇನೆ ಎಂದಿದ್ದಕ್ಕೆ ಕೆಲವರು ಆಕ್ಷೇಪಿಸಿದ್ದಾರೆ. ಬಳಿಕ ನಿವೇದಿತಾ ನಾನು ತಮಾಷೆಗೆ ಹೇಳಿದ್ದು ಎಂದರೂ ಅವರ ಮಾತನ್ನ ಯಾರೂ ಕೇಳದಿದ್ದಾಗ, ನನ್ನನ್ನು ಯಾರೂ ಮಾತಾಡಿಸಬೇಡಿ ಎಂದು ನಿವೇದಿತಾ ಅತ್ತಿದ್ದಾರೆ. ಸದಸ್ಯರೆಲ್ಲರನ್ನೂ ಅವರು ಮಾತನಾಡಿಸಲು ಪ್ರಯತ್ನಿಸಿದರು ಯಾರೂ ಸ್ಪಂದಿಸಲಿಲ್ಲ. ಬಳಿಕ ಸಮೀರಾಚಾರ್ಯ ಹಾಗೂ ರಿಯಾಜ್‌ ನಿವೇದಿತಾರನ್ನು ಮಾತನಾಡಿಸಿ ಸಮಾಧಾನಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com