ಜಿಗ್ನೇಶ್‌ ವಿರುದ್ದದ ದೂರಿಗೂ ಕೋರೆಗಾಂವ್‌ ಹಿಂಸಾಚಾರಕ್ಕೂ ಸಂಬಂಧವಿಲ್ಲ : ಪ್ರಕಾಶ್‌ ಅಂಬೇಡ್ಕರ್‌

ಮುಂಬೈ : ಭೀಮ ಕೋರೆಗಾಂವ್ ಹಿಂಸಾಚಾರ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ  ಬಿ.ಆರ್‌ ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್‌ ಕರೆ ನೀಡಿದ್ದ ಮಹಾರಾಷ್ಟ್ರ ಬಂದನ್ನು ಹಿಂಪಡೆಯಲಾಗಿದೆ.
ಇದೇ ವೇಳೆ ಮಾತನಾಡಿರುವ ಪ್ರಕಾಶ್‌ ಅಂಬೇಡ್ಕರ್‌, ಜಿಗ್ನೇಶ್‌ ಮೇವಾನಿ, ಉಮರ್‌ ಖಾಲಿದ್‌ ವಿರುದ್ದ ದಾಖಲಾಗಿರುವ ಪ್ರಚೋದನಕಾರಿ ಭಾಷಣದ ದೂರಿಗೂ ಕೋರೆಗಾಂವ್‌ ಹಿಂಸಾಚಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜನವರಿ  1ರಂದು ಭೀಮಾ ಕೋರೆಗಾಂವ್‌ನಲ್ಲಿ ಸೇರಿದ್ದ ಜನ ಸಮೂಹವನ್ನು ಪ್ರಚೋದಿಸಿದ್ದ ಭಿಡೆ ಗುರೂಜಿ ಹಾಗೂ ಮಿಲಿಂದ್‌ ಎಕ್ಬೋಟ್‌ ರನ್ನು ಪೊಲೀಸರು ಬಂಧಿಸುವಂತೆ ಪ್ರಕಾಶ್‌ ಅಂಬೇಡ್ಕರ್ ಆಗ್ರಹಿಸಿದ್ದಾರೆ.
 ಮಹರಾಷ್ಟ್ರದಲ್ಲಿ ಕರೆ ನೀಡಲಾಗಿದ್ದ ಬಂದ್‌ ಮುಂಬೈ ಹಾಗೂ ಔರಂಗಾಬಾದ್‌ ಬಿಟ್ಟರೆ ಉಳಿದೆಲ್ಲೆಡೆ ಶಾಂತಿಯುತವಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published.

Social Media Auto Publish Powered By : XYZScripts.com