ಅರ್ಧ ಹೆಲ್ಮೆಟ್‌ ಧರಿಸಿ ಓಡಾಡುವವರಿಗೆ ಕಾದಿದೆ ದಂಡ : ಗೃಹ ಸಚಿವರ ಆದೇಶವಾದರೂ ಏನು ?

ಬೆಂಗಳೂರು : ಬೆಂಗಳೂರಿನ ವಾಹನ ಸವಾರರಿಗೊಂದು ಶಾಕಿಂಗ್ ನ್ಯೂಸ್‌ ಬಂದಿದೆ. ಬೈಕ್‌ ಸವಾರರು ಅರ್ಧ ಹೆಲ್ಮೆಟ್‌ ಹಾಕಿ ಗಾಡಿ ಓಡಿಸುತ್ತಿದ್ದರೆ ದಂಡ ಹಾಕುವಂತೆ ಪೊಲೀಸ್‌ ಅಧಿಕಾರಿಗಳಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.

ದೂರವಾಣಿ ಮೂಲಕ ಅಧಿಕಾರಿಗಳಿಗೆ ಸೂಚನೆ ನೀಡಿರುವ ಅವರು, 15 ದಿನಗಳ ನೋಟಿಸ್‌ ನೀಡಿ ದಂಡ ಹಾಕುವಂತೆ ಆದೇಶಿಸಿರುವುದಾಗಿ ಮೂಲಗಳು ತಿಳಿಸಿವೆ. ಸದ್ಯ ಮೈಸೂರಿನಲ್ಲಿ ಜಾರಿಯಲ್ಲಿರುವ ಈ ಪ್ರಕ್ರಿಯೆ ಬೆಂಗಳೂರಿಗೂ ಬರಲಿದೆ.

ಮೈಸೂರಿನಲ್ಲಿ ಪೊಲೀಸರು ಬಿಐಎಸ್‌ ಮತ್ತು ಐಎಸ್‌ಐ ಗುಣಮಟ್ಟ ಹೊಂದಿರದ ಹಾಗಬ ಅರ್ಧ ಹೆಲ್ಮೆಟ್‌ ವಿರುದ್ದ ಮಂಗಳವಾರ ಭಾರೀ ಕಾರ್ಯಾಚರಣೆ ನಡೆಸಿದ್ದು. 15 ಸಾವಿರಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com