ನನ್ನೆದುರೇ ರೇಪ್‌ ಮಾಡಿದ್ರು, ನಿನ್ನ Loverಗೂ ಇದೇ ಗತಿ ಅಂದ್ರು : ಉಗ್ರರ ಬಗ್ಗೆ ಬಾಯ್ಬಿಟ್ಟ ವಿದ್ಯಾರ್ಥಿ

ಬಾಗಲಕೋಟೆ : ಉಗ್ರರು ತನ್ನನ್ನು ವಿಧ್ವಂಸಕ ಕೃತ್ಯಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ಹೇಳಿ ಆತ್ಮಹತ್ಯೆಗೆ ಮುಂದಾಗಿದ್ದ ಇಂಜಿನಿಯರಿಂದ್‌ ವಿದ್ಯಾರ್ಥಿ ಪ್ರಕರಣ ಟ್ವಿಸ್ಟ್‌ ಪಡೆದುಕೊಂಡಿದೆ.
ವಿಷ ಸೇವಿಸಿ ಆಸ್ಪತ್ರೆ ಸೇರಿ ಬಳಿಕ ಡಿಸ್ಚಾರ್ಜ್‌ ಆಗಿರುವ ಶರಣಪ್ಪ ನಗರಾಳ ಪೊಲೀಸ್‌ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಶರಣಪ್ಪ ಮೈಸೂರಿನಲ್ಲಿ ಇಂಜಿನಿಯರಿಂಗ್‌ ಓದುತ್ತಿದ್ದು, ಒಂದೂವರೆ ವರ್ಷದ ಹಿಂದೆ ರಫೀಕ್ ಹಾಗೂ ಇಸ್ಮಾಯಿಲ್‌ ಎಂಬುವವರು ವರ್ಷದ ಹಿಂದೆ ಪರಿಚಯವಾಗಿದ್ದರು. ಬಳಿಕ ರಫೀಕ್‌ ಹಾಗೂ ಇಸ್ಮಾಯಿಲ್ ಇಬ್ಬರೂ ನನಗೆ ಮೈಸೂರಿನಲ್ಲಿ ಮತ್ತು ಬರುವ ಇಂಜೆಕ್ಷನ್‌ ನೀಡಿ ಗುಪ್ತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು ಎಂದಿದ್ದಾರೆ.
ನನ್ನನ್ನು ಕುರ್ಚಿಗೆ ಕಟ್ಟಿಹಾಕಿ ಭಯೋತ್ಪಾದಕ ಚಟುವಟಿಕೆ ನಡೆಸುವಂತೆ ಚಿತ್ರಹಿಂಸೆ ನೀಡಿದ್ದರು, ನನ್ನ ಎಲ್ಲಾ ಮಾಹಿತಿ ಕಲೆ ಹಾಕಿ ಬೆದರಿಕೆ ಹಾಕುತ್ತಿದ್ದರು ಎಂದಿದ್ದಾರೆ.
ಅಲ್ಲದೆ ಅವರಿಬ್ಬರೂ ನನ್ನ ಕಣ್ಣ ಮುಂದೆಯೇ 18ರಿಂದ 20 ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದರು. ನಮ್ಮ ಮಾತು ಕೇಳದಿದ್ದರೆ ನಿನ್ನ ಕುಟುಂಬದವರಿಗೂ ಇದೇ ರೀತಿ ಆಗುತ್ತದೆ ಎಂದಿದ್ದರು. ಇದರಿಂದ ನನ್ನ ಪ್ರೇಯಸಿ ಹಾಗೂ ಕುಟುಂಬಕ್ಕೆ ಭಯ ಕಾಡುತ್ತಿದೆ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ನನ್ನನ್ನು ಅನೇಕರು ಮಾನಸಿಕ ಅಸ್ವಸ್ಥ ಎನ್ನುತ್ತಿದ್ದಾರೆ. ಈಗಾಗಲೆ ನನಗೆ ಅನೇಕ ಬಾರಿ ಕೌನ್ಸಿಲಿಂಗ್ ಮಾಡಿಸಲಾಗಿದೆ. ಆದರೆ ಸಾಯುವ ಹಂತದಲ್ಲಿದ್ದ ನಾನು ಯಾಕೆ ಸುಳ್ಳು ಹೇಳಲಿ. ಕರ್ನಾಟಕದಲ್ಲಿ ಉಗ್ರ ಚಟುವಟಿಕೆ ನಡೆಯುತ್ತಿದೆ. ಅವರಿಬ್ಬರ ಬಗ್ಗೆ ಮಾಹಿತಿ ನೀಡಲು ನಾನು ಸಿದ್ಧನಿದ್ದೇನೆ. ಅವರನ್ನು ಹುಡುಕಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇನ್ನು ಈ ಕುರಿತು ಬಾಗಲಕೋಟೆ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್‌ ಹೇಳಿಕೆ ನೀಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಯುವಕ ಹೇಳುತ್ತಿರೋದೆಲ್ಲಾ ಸುಳ್ಳು. ಸದ್ಯದ ತನಿಖೆಯ ಪ್ರಕಾರ ಯಾವುದೇ ಸತ್ಯಾಂಶ ಕಂಡು ಬಂದಿಲ್ಲ. ಈ ವಿಚಾರವಾಗಿ ಪಾಲಕರು, ಕಾಲೇಜ್ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರನ್ನು ವಿಚಾರಿಸಲಾಗಿದೆ. ಮೀಡಿಯಾ ಹಾಗೂ ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆಂಬ ಸಂಶಯ ಇದೆ.ಈ ಹಿಂದೆ ಶರಣಪ್ಪ ನಾಗರಾಳ ಹುಡುಗಿಯನ್ನು ಪ್ರೀತಿಸಿ ಡಿಪ್ರೆಸ್ ಆಗಿದ್ದ, ಪ್ರೀತಿಯ ಗುಂಗಿನಲ್ಲಿ ಇಂಜಿನಿಯರಿಂಗ್ ವಿಭಾಗದ ಪರೀಕ್ಷೆಯ ಎಲ್ಲ ವಿಷಯಗಳಲ್ಲೂ ಶರಣಪ್ಪ ಫೇಲ್ ಆಗಿದ್ದ. ಮೀಡಿಯಾದಲ್ಲಿ ಹೈಪ್ ಪಡೆದುಕೊಳ್ಳಲು ಈ ರೀತಿಯಾಗಿ ವರ್ತಿಸುತ್ತಿದ್ದಾನೆ. ಇದೇ ರೀತಿ ಮುಂದುವರೆದ್ರೆ, ಶರಣಪ್ಪನ ಮೇಲೆ ಕೇಸ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com