Uttar Pradesh : ಗಂಡನ ಚಿಕಿತ್ಸೆಗಾಗಿ 15 ದಿನದ ಹಸುಗೂಸನ್ನೇ ಮಾರಿದ ಮಹಿಳೆ..!

ಗಂಡನ ಚಿಕಿತ್ಸೆಯ ದುಡ್ಡಿಗಾಗಿ ಮಹಿಳೆಯೊಬ್ಬಳು ತನ್ನ 15 ದಿನದ ಹಸುಗೂಸನ್ನು ಮಾರಿದ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಮಿರಗಂಜ್ ಪ್ರದೇಶದಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪತಿಯ ಚಿಕಿತ್ಸೆಗಾಗಿ ಮಹಿಳೆಗೆ 45000 ರೂಪಾಯಿಗಳ ಅಗತ್ಯವಿತ್ತು.

ಹಣದ ಕೊರತೆಯಿಂದ ದಿಕ್ಕು ತೋಚದಂತಾದ ಮಹಿಳೆ 15 ದಿನಗಳ ಹಿಂದೆ ಜನಿಸಿದ್ದ ತನ್ನ ಸ್ವಂತ ಮಗುವನ್ನು 45000 ರೂಪಾಯಿಗೆ ಮಾರಿಕೊಂಡಿದ್ದಾಳೆ. ‘ ನನ್ನ ಬಳಿ ಪತಿಯ ಚಿಕಿತ್ಸೆಗೆ ಸಾಕಾಗುವಷ್ಟು ಹಣವಿರಲಿಲ್ಲ, ದುಡ್ಡನ್ನು ಹೊಂದಿಸಲು ಬೇರೆ ದಾರಿ ಇರಲಿಲ್ಲ ‘ ಎಂದು ಮಹಿಳೆ ಹೇಳಿದ್ದಾಳೆ.

 

ಸಮಾಜ ಕಲ್ಯಾಣ ಹಾಗೂ ಸಾಮಾಜಿಕ ಶಿಕ್ಷಣ ಇಲಾಖೆ ಈ ಘಟನೆಯ ಬಗ್ಗೆ ತಿಳಿದ ನಂತರ ಕಾರ್ಯಪ್ರವೃತ್ತರಾಗಿದ್ದು, ಮಗುವನ್ನು ಮರಳಿ ತಾಯಿಯ ಬಳಿ ಸೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com