ನಾನು ಪ್ರಾಣ ಬಿಟ್ಟರೆ ಅದು ದೇಶದ ಗಡಿಯಲ್ಲೇ ಅಂದ್ರು “ಅಲ್ಲು ಅರ್ಜುನ್‌”…..ಯಾಕೆ ?

ಟಾಲಿವುಡ್‌ನಲ್ಲಿ ಈಗ ಅಲ್ಲು ಅರ್ಜುನ್‌ ಸದ್ದು ಮಾಡುತ್ತಿದ್ದಾರೆ. ಸೋಮವಾರ ಅಲ್ಲು ಅರ್ಜುನ್‌ ಅಭಿನಯದ ನಾ ಪೇರು ಸೂರ್ಯ- ನಾ ಇಲ್ಲು ಇಂಡಿಯಾ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಇದರಲ್ಲಿ ಭಾರತೀಯ ಸೋನೆಯ ಯೋಧನಾಗಿ ಅರ್ಜುನ್‌ ಕಾಣಿಸಿಕೊಂಡಿದ್ದಾರೆ.

ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇಷ್ಟವಾಗುವಂತಿರುವ ಈ ಟ್ರೇಲರ್‌, ಅಭಿಮಾನಿಗಳಲ್ಲಿ ದೇಶಪ್ರೇಮ ಹೆಚ್ಚುವಂತೆ ಮಾಡಿದೆ. ಒಬ್ಬ ಸೈನಿಕ ತನ್ನ ದೇಶದ ರಕ್ಷಣೆಗೆ ಯಾವೆಲ್ಲಾ ಕಷ್ಟ, ತೊಂದರೆಗಳನ್ನು ಎದುರಿಸುತ್ತಾನೆ ಎಂಬುದು ಟ್ರೇಲರ್‌ನಿಂದ ತಿಳಿಯುತ್ತದೆ. ಸಿನಿಮಾದಲ್ಲಿ ಅರ್ಜುನ್‌ ಇಂಡಿಯಾ ಸೇನೆಯೊಂದರ ತುಕಡಿಯ ಕ್ಯಾಪ್ಟನ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸೈನಿಕನಿರಬೇಕಾದ ಸಿಟ್ಟು, ಗತ್ತು ಇದೆಲ್ಲವೂ ಅರ್ಜುನ್ ಅಭಿನಯದಲ್ಲಿದ್ದು, ಚಿತ್ರದ ಕ್ರೇಜ್‌ ಹೆಚ್ಚಿಸಿದೆ.

ಟ್ರೇಲರ್‌ನಲ್ಲಿನ ಡೈಲಾಗ್‌ ಒಂದು ಆಕರ್ಷಕವಾಗಿದ್ದು, ನಾನು ಪ್ರಾಣಬಿಟ್ಟರೆ ಅದು ನನ್ನ ದೇಶದ ಗಡಿಯಲ್ಲೇ ಎಂಬಂತಹ ಪಂಚಿಂಗ್‌ ಡೈಲಾಗ್‌ಗಳು ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸುವಂತೆ ಮಾಡಿವೆ. ಇನ್ನು ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಜೊತೆ ಅನು ಎಮ್ಯಾನುಲ್‌ ಅಭಿನಯಿಸಿದ್ದಾರೆ. ಚಿತ್ರಕ್ಕೆ ವಕ್ಕನಾಥಮ್‌ ವಂಶಿ ನಿರ್ದೇಶನವಿದ್ದು, ಸಿರಿಸಾ ಶ್ರೀಧರ್‌ ಹಾಗು ಬನ್ನಿ ವಾಸ್‌ ನಿರ್ಮಾಪಕರಾಗಿ ಹಣ ಹೂಡಿದ್ದಾರೆ. ಟ್ರೇಲರ್‌ ರಿಲೀಸ್‌ ಆದ ಒಂದೇ ದಿನದಲ್ಲಿ 6 ಲಕ್ಷ ವ್ಯೂವ್ಸ್‌ ಹಾಗೂ 25 ಸಾವಿರ ಲೈಕ್ಸ್‌ ಪಡೆದುಕೊಂಡಿದೆ.

Leave a Reply

Your email address will not be published.