ಸೌದಿ ಮಾಡಿದ್ದನ್ನೇ ತಾನು ಮಾಡಿದ್ದೆಂದು ಮೋದಿ ಮೆರೆಯುತ್ತಿದ್ದಾರೆ, ಇದು ಬೇಕಿತ್ತಾ? : ಓವೈಸಿ

ದೆಹಲಿ : ಮೂರು ವರ್ಷಗಳ ಹಿಂದೆ ಸೌದಿ ಅರೇಬಿಯಾ ಮಾಡಿದ್ದನ್ನೇ ಮೋದಿ ಸಹ ಮಾಡಿ ಕ್ರೆಡಿಟ್‌ ತೆಗೆದುಕೊಳ್ಳುತ್ತಿದ್ದಾರೆ . ಇದೆಲ್ಲ ಅವರಿಗೆ ಬೇಕಿತ್ತಾ ಎಂದು ಪ್ರಧಾನಿ ಮೋದಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಪ್ರಶ್ನಿಸಿದ್ದಾರೆ.

ನಾಲ್ವರು ಮಹಿಳೆಯರು ಗುಂಪಾಗಿ ಅಥವಾ ಪುರುಷ ಸಂಬಂಧಿಯೊಂದಿಗೆ 45 ವರ್ಷಕ್ಕಿಂತ ಮೇಲ್ಪಟ್ಟ ಮುಸ್ಲಿಂ ಮಹಿಳೆ ಹಜ್‌ ಯಾತ್ರೆ ಕೈಗೊಳ್ಳುವ ಅವಕಾಶವನ್ನು 3 ವರ್ಷಗಳ ಹಿಂದೆ ಸೌದಿ ಅರೇಬಿಯಾ ಸರ್ಕಾರ ನೀಡಿದೆ. ಯಾವುದೇ ರಾಷ್ಟ್ರ 45 ವರ್ಷ ಮೇಲ್ಪಟ್ಟ ಮುಸ್ಲಿಂ ಮಹಿಳೆಯರು ಸ್ವತಂತ್ರವಾಗಿ ಹಜ್‌ ಯಾತ್ರೆ ಕೈಗೊಳ್ಳಬಹುದು.

ಇದನ್ನು ಉದಾಹರಣೆಯಾಗಿ ತೆಗೆದುಕೊಂಡು ಪ್ರತಿಕ್ರಿಯಿಸಿರುವ ಓವೈಸಿ, ಮತ್ತೊಂದು ಸರ್ಕಾರ ಮಾಡಿರುವ ಕೆಲಸವನ್ನೇ ತಾನು ಮಾಡಿದ್ದೇನೆ ಎಂದು ಮೋದಿ ಹೇಳಿಕೊಳ್ಳುತ್ತಿದ್ದಾರೆ. ಈ ನಿರ್ಣಯ ಕೈಗೊಳ್ಳಲು ಅಧಿಕಾರಕ್ಕೆ ಬಂದ ಮೇಲೆ ಇಷ್ಟು ವರ್ಷ ತೆಗೆದುಕೊಂಡಿರುವುದ್ದಾರೆ. ಅದನ್ನೇ ಈಗ ಹೊಗಳಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಮೋದಿ ಭಾನುವಾರ ನಡೆಸಿದ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಹಜ್‌ ಯಾತ್ರೆಗೆ ಮುಸ್ಲಿಂ ಮಹಿಳೆಯರ ಮೇಲಿನ ನಿಷೇಧ ತೆರವುಗೊಳಿಸಿದ್ದರ ಕುರಿತು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಓವೈಸಿ, ಇದೇನು ಮೋದಿಯ ಮಹಾನ್ ಕಾರ್ಯವಲ್ಲ. ಸೌದಿ ಅರೇಬಿಯಾ ಮಾಡಿದ ಘನಕಾರ್ಯದ ಕೀರ್ತಿಯನ್ನು ಮೋದಿ ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುವುದು ಬೇಕಾಗಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com