ಕರಾವಳಿಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ : ಭಿನ್ನ ಕೋಮಿನ ವಿದ್ಯಾರ್ಥಿಗಳಿಗೆ ಥಳಿತ

ಮಂಗಳೂರು : ನಗರದಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ ಪ್ರಕರಣ ದಾಖಲಾಗದೆ. ಮಂಗಳೂರಿನಲ್ಲಿರುವ ಪ್ರವಾಸಿ ತಾಣವಾದ ಪಿಲಿಕುಳ ನಿಸರ್ಗಧಾಮದ ವಾಟರ್‌ ಪಾರ್ಕಿನಲ್ಲಿ ಇಬ್ಬರು ಅನ್ಯಕೋಮಿನ ವಿದ್ಯಾರ್ಥಿಯರ ಜೊತೆ ಯುವಕನೊಬ್ಬ ಇದ್ದುದನ್ನು ನೋಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಆತನಿಗೆ ಥಳಿಸಿದ್ದಾರೆ.

ಯುವಕ ಹಾಗೂ ಯುವತಿಯರು ಒಂದೇ ಕಾಲೇಜಿನವರಾಗಿದ್ದು, ಪಿಲಿಕುಳದ ಮಾನಸ ವಾಟರ್‌ ಪಾರ್ಕ್‌ಗೆ ಹೋಗಿದ್ದರು. ಅನ್ಯ ಕೋಮಿನ ವಿದ್ಯಾರ್ಥಿಗಳು ಒಟ್ಟಿಗೆ ಇರುವುದನ್ನು ನೋಡಿದ ಸ್ಥಳೀಯರು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಕೂಡಲೆ ಕಾರ್ಯಕರ್ತರು ಪಾರ್ಕ್‌ನೊಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಹಿಂದೂ ಸಂಘಟನೆಯ ಯುವಕ ಸಂಪತ್‌ ಎಂಬಾತ ಪೊಲೀಸರ ಎದುರೇ ವಿದ್ಯಾರ್ಥಿನಿಗೆ ಥಳಿಸಿದ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com