ಮನಗೆದ್ದ Gambhir ಟ್ವೀಟ್ : ಚಾಂಪಿಯನ್ Vidarbha ತಂಡಕ್ಕೆ ಗೌತಿ ಹೇಳಿದ್ದೇನು..?

2017-18ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ವಿದರ್ಭ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಂದೋರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದೆಹಲಿ ವಿರುದ್ಧ 9 ವಿಕೆಟ್ ಜಯಗಳಿಸಿದ ವಿದರ್ಭ ತಂಡ ಟ್ರೋಫಿ ಎತ್ತಿಹಿಡಿದಿತ್ತು.

ಫೈನಲ್ ಬಳಿಕ ದೆಹಲಿ ತಂಡದ ನಾಯಕ ಗೌತಮ್ ಗಂಭೀರ್ ಟ್ವೀಟ್ ಮಾಡಿ ವಿದರ್ಭ ಆಟಗಾರರನ್ನು ಅಭಿನಂದಿಸಿದ್ದಾರೆ. ಟೂರ್ನಿಯುದ್ದಕ್ಕೂ ಸ್ಥಿರಪ್ರದರ್ಶನ ತೋರಿ ಚಾಂಪಿಯನ್ ಆದ ವಿದರ್ಭ ತಂಡವನ್ನು ಗೌತಮ್ ಗಂಭೀರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವಿದರ್ಭ ತಂಡಕ್ಕೆ ಭವಿಷ್ಯದಲ್ಲಿ ಇನ್ನೂ ಉತ್ತಮ ದಿನಗಳು ಬರಲಿವೆ ಎಂದು ಹೇಳಿದ್ದಾರೆ.

ಫೈನಲ್ ನಲ್ಲಿ ನಿರಾಸೆ ಅನುಭವಿಸಿದರೂ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ದೆಹಲಿ ತಂಡದ ಆಟಗಾರರನ್ನು ಪ್ರಶಂಸಿವುದನ್ನು ಗಂಭೀರ್ ಮರೆಯಲಿಲ್ಲ. ಮತ್ತೊಂದು ಟ್ವೀಟ್ ಮಾಡಿರುವ ಗೌತಿ ನಮ್ಮ ಆಟಗಾರರ ಬಗ್ಗೆ ಹೆಮ್ಮಯಿದೆ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com