ಮಹಿಳೆ ಮೇಲೆ BJP ಕಾರ್ಪೋರೇಟರ್‌ ರೌಡಿಸಂ : ರಸ್ತೆಯಲ್ಲೇ ಸೀರೆ ಎಳೆದಾಡಿ ಹಲ್ಲೆ ?

ಬೆಂಗಳೂರು : ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಡುಗೋಡಿಯ ಬಿಜೆಪಿ ಕಾರ್ಪೋರೇಟರ್‌ ಮುನಿಸ್ವಾಮಿ ವಿರುದ್ದ ದೂರು ದಾಖಲಾಗಿದೆ.

ಇವರು ಶಾಸಕ ಅರವಿಂದ ಲಿಂಬಾವಳಿ ಅವರ ಬೆಂಬಲಿಗರಾಗಿದ್ದು, ಮುನಿಸ್ವಾಮಿ ವಿರುದ್ಧ ಕಾಡುಗೋಡಿ ನಿವಾಸಿ ರುಕ್ಮಿಣಿ ಎಂಬ ಮಹಿಳೆ ದೂರು ನೀಡಿದ್ದಾರೆ. ರುಕ್ಮಿಣಿ ತಮ್ಮ ಜಾಗದಲ್ಲಿ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಆದರೆ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂದು ಆರೋಪಿಸಿ ನಿರ್ಮಿಸಿದ್ದ ಶೆಡ್‌ಗಳನ್ನು ತೆರವು ಮಾಡಲು ಕಾರ್ಪೋರೇಟರ್ ಮುನಿಸ್ವಾಮಿ ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ರುಕ್ಮಿಣಿಯವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ರಸ್ತೆಯಲ್ಲೇ ಎಳೆದಾಡಿ, ಸೀರೆ ಹರಿದು, ಕಪಾಳಕ್ಕೆ ಹೊಡೆದಿದ್ದಾರೆ ಎಂದೂ ತಿಳಿಸಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com