ಮಹದಾಯಿ ವಿವಾದಕ್ಕೆ Twist : ಪರ್ರಿಕ್ಕರ್‌ ವಿರುದ್ಧವೇ ಅಮಿತ್ ಶಾಗೆ ದೂರು ನೀಡಿದ BSY

ಮಹದಾಯಿ : ಅಮಿತ್ ಶಾ ಹಾಗೂ ಮನೋಹರ್‌ ಪರ್ರಿಕ್ಕರ್‌ ಜೊತೆ ಮಾತುಕತೆ ಬಳಿಕ ಮಹದಾಯಿ ವಿವಾದವನ್ನು ಬಗೆಹರಿಸುತ್ತೇವೆ ಎಂದು, ಬಳಿಕ ಪ್ರತಿಭಟನೆ ಎದುರಿಸಿದ್ದ ಮಾಜಿ ಸಿಎಂ ಬಿಎಸ್‌ವೈ ಈಗ ತಿರುಗಿ ಬಿದ್ದಿದ್ದಾರೆ. ಗೋವಾದ ಇಬ್ಬಗೆಯ ನೀತಿಗೆ ಕರ್ನಾಟಕ ಬಿಜೆಪಿಯಿಂದಲೇ ವಿರೋಧ ವ್ಯಕ್ತವಾಗಿದೆ.

ಮಹದಾಯಿ ವಿವಾದ ಕುರಿತಂತೆ ಮಾತುಕತೆಗೆ ಒಪ್ಪಿ ಬಿಎಸ್‌ವೈ ಪತ್ರ ಬರೆದಿದ್ದು, ಇದಕ್ಕೆ ಗೋವಾ ಸಿಎಂ ಪರ್ರಿಕ್ಕರ್‌ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ ಮಹದಾಯಿ ಹೋರಾಟಗಾರರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲಿ ಬಿಜೆಪಿ ಇಮೇಜ್‌ಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ದೂರು ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲದೆ ನರಗುಂದದಲ್ಲಿ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್‌ ಸೊರಬದಮಠ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಬಿಜೆಪಿ ಕಚೇರಿ ಮುಂದೆ ಹೋರಾಟ ಮಾಡಿದ್ದಕ್ಕಾಗಿ ಹಲ್ಲೆ ನಡೆಸಿರುವುದಾಗಿ ಸೊರಬದಮಠ ಅವರು ದೂರಿದ್ದಾರೆ. ಈ ಎಲ್ಲಾ ಘಟನೆಗಳು ಬಿಜೆಪಿಗೆ ಮೈನಸ್ ಪಾಯಿಂಟ್‌ ಆಗಿದ್ದು, ಮಹದಾಯಿ ವಿವಾದ ಇತ್ಯರ್ಥ ಪಡಿಸಿದರೆ ಮಾತ್ರ ತಮ್ಮ ಗೆಲುವು ಎಂಬುದು ಅರ್ಥವಾದಂತಾಗಿದೆ.

ಈ ವಿಚಾರದಲ್ಲಿ ಪರ್ರಿಕ್ಕರ್‌ ಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಯಡಿಯೂರಪ್ಪ ಅಮಿತ್‌ ಶಾಗೆ ಒತ್ತಾಯಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com