ಕರ್ನಾಟಕದವರು ಭಾರತೀಯರಲ್ವಾ ? : ಮೋದಿಗೆ ಅಂಬರೀಶ್‌ ಪ್ರಶ್ನೆ

ಬೆಂಗಳೂರು : ಅನೇಕ ದಿನಗಳ ಬಳಿಕ ಮಾಜಿ ಸಚಿನ ಅಂಬರೀಶ್‌ ವಿಧಾನಸೌಧಕ್ಕೆ ಆಗಮಿಸಿದ್ದು, ಈ ವೇಳೆ ಪ್ರಧಾನಿ ಮೋದಿಗೆ ಟಾಂಗ್‌ ನೀಡಿದ್ದಾರೆ. ಮಹದಾಯಿ ವಿಚಾರದಲ್ಲಿ ಸ್ವಾರ್ಥ ಬಿಟ್ಟು ಕೆಲಸ ಮಾಡಿದರೆ ನಿಮಿಷಗಳಲ್ಲಿ ಪರಿಹಾರ ಸಿಗುತ್ತದೆ ಎಂದಿರುವ ಅಂಬರೀಶ್‌, ಯಾಕೆ ಕರ್ನಾಟಕದವರೇನು ಭಾರತೀಯರಲ್ಲವಾ ಎಂದು ಪ್ರಶ್ನಿಸಿದ್ದಾರೆ.

ನಾವು ಕೇಳುತ್ತಿರುವುದು ಕುಡಿಯುವ ನೀರು. 7.52 ಟಿಎಂಸಿ. ಅದನ್ನೂ ಕೊಡಲ್ಲ ಎಂದರೆ ಹೇಗೆ. ಇಲ್ಲಿ ಎಲ್ಲರದ್ದೂ ಸ್ವಾರ್ಥವಿದೆ. ಚೆನ್ನೈನಲ್ಲಿ ಪ್ರಕೃತಿ ವಿಕೋಪವಾದಾಗ ಮೋದಿ ಖುದ್ದು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಆದರೆ ನಮಗೆ ಅದಕ್ಕಿಂತ ಹೆಚ್ಚಿನ ತೊಂದರೆಯಾದರೂ ಪ್ರಧಾನಿ ತಿರುಗಿ ನೋಡಿಲ್ಲ. ನಾವು 18 ಬಿಜೆಪಿ ಸಂಸದರನ್ನು ಕಳುಹಿಸಿದ್ದೇವೆ. ಆದರೆ ತಮಿಳುನಾಡಿನಲ್ಲಿ ಒಬ್ಬ ಬಿಜೆಪಿ ಸಂಸದನನ್ನೂ ಗೆಲ್ಲಿಸಲಿಲ್ಲ. ಆದರೂ ಈ ಪೂರ್ವಾಗ್ರಹ ಏಕೆ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ರಜಿನೀಕಾಂತ್‌ ರಾಜಕೀಯ ಪ್ರವೇಶ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಈ ವಿಚಾರವನ್ನು ಇವತ್ತೆ ಬರೆದಿಟ್ಟುಕೊಳ್ಳಿ, ಅವರ ಗೆಲುವು ನಿಶ್ಚಿತ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com