ಗೀತೆಯನ್ನು ಉರ್ದು ಭಾಷೆಗೆ ಅನುವಾದಿಸಿದ್ದ ಕವಿ ಅನ್ವರ್ ಜಲಾಲ್ ಪುರಿ ನಿಧನ

ಖ್ಯಾತ ಉರ್ದು ಕವಿ ಅನ್ವರ್ ಜಲಾಲ್ ಪುರಿ ಮಂಗಳವಾರ ನಿಧನ ಹೊಂದಿದ್ದಾರೆ. ನಾಲ್ಕು ದಿನಗಳ ಹಿಂದೆ ಬ್ರೇನ್ ಸ್ಟ್ರೋಕ್ ಆದ ಕಾರಣ ಲಖ್ನೋದ ಕಿಂಗ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ 71 ವರ್ಷದ ಅನ್ವರ್ ಜಲಾಲ್ ಪುರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅನ್ವರ್ ಹೆಂಡತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಕೋಮು ಸೌಹಾರ್ದ ಮೂಡಿಸುವ ಉದ್ದೇಶದಿಂದ ಅನ್ವರ್ ಜಲಾಲ್ ಪುರಿ ಭಗವದ್ಗೀತೆಯ 700 ಸಂಸ್ಕೃತದ ಶ್ಲೋಕಗಳನ್ನು ಉರ್ದು ಭಾಷೆಗೆ ಅನುವಾದಿಸಿದ್ದರು. ಅಕ್ಬರ್ ದಿ ಗ್ರೇಟ್ ಟಿವಿ ಧಾರಾವಾಹಿಗಾಗಿ ಸಂಭಾಷಣೆ ಬರೆದಿದ್ದರು.

ಅನ್ವರ್ ಜಲಾಲ್ ಪುರಿ ಉತ್ತರ ಪ್ರದೇಶದ ಹಜ್ ಕಮೀಟಿ ಸದಸ್ಯರೂ ಹಾಗೂ ಮದರಸಾ ಶಿಕ್ಷಣ ಬೋರ್ಡ್ ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com