ತೆಲಂಗಾಣ ಸರ್ಕಾರದಿಂದ ಹೊಸ ವರ್ಷಕ್ಕೆ ಭರ್ಜರಿ Gift : ರೈತರಿಗೆ Free ವಿದ್ಯುತ್‌

ಹೈದರಾಬಾದ್‌ : ಹೊಸ ವರ್ಷಕ್ಕೆ ತೆಲಂಗಾಣ ರಾಜ್ಯದ ರೈತರಿಗೆ ಸಿಎಂ ಚಂದ್ರಶೇಖರ್‌ ರಾವ್‌ ಸಿಹಿಸುದ್ದಿ ನೀಡಿದ್ದು, ರಾಜ್ಯದ ರೈತರೆಲ್ಲರಿಗೂ ಉಚತ ವಿದ್ಯುತ್‌ ಹಾಗೂ ರಾಜ್ಯದ ಎಲ್ಲಾ ನಿವಾಸಿಗಳಿಗೆ ಉಚಿತ ಹಾಗೂ ನಿರಂತರ ವಿದ್ಯುತ್‌  ಸರಬರಾಜು ಮಾಡುವುದಾಗಿ ಘೋಷಿಸಿದ್ದಾರೆ.
ಈ ಕುರಿತು ತೆಲಂಗಾಣ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ. ರಾಜ್ಯದ ಒಟ್ಟು 23 ಲಕ್ಷ ಪಂಪ್‌ಸೆಟ್‌ಗಳಿಗೆ ನೀಡಲಾಗುವ ವಿದ್ಯುತ್ತನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದು, ರಾಜ್ಯದ ನಿವಾಸಿಗಳಿಗೂ ಉಚಿತ ವಿದ್ಯುತ್‌ ಸಿಗಲಿದೆ .
ತೆಲಂಗಾಣಕ್ಕೆ ಅಗತ್ಯವಿರುವಷ್ಟು ವಿದ್ಯುತ್ ಸರಬರಾಜಾಗುತ್ತಿದ್ದು, 198 ದಶಲಕ್ಷ ಯುನಿಟ್‌ ವಿದ್ಯುತ್ತನ್ನು ಪೂರೈಕೆ ಮಾಡುತ್ತಿದೆ. ಬೇಸಿಗೆಯಲ್ಲೂ ರಾಜ್ಯದ ನಿವಾಸಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿರುವುದಾಗಿ ಸರ್ಕಾರಿ ಮೂಲಗಳು ಹೇಳಿವೆ.

Leave a Reply

Your email address will not be published.