ಅಣ್ವಸ್ತ್ರ Button ನನ್ನ ಟೇಬಲ್‌ ಮೇಲಿದೆ : ಟ್ರಂಪ್‌ ವಿರುದ್ದ ಮತ್ತೆ ತೊಡೆತಟ್ಟಿದ ಉ.ಕೊರಿಯಾ

ಪ್ಯಾಂಗ್‌ಯಾಂಗ್‌ : ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಂಗ್‌ ಉನ್‌ ಹೊಸ ವರ್ಷದ ಸಂದೇಶದಲ್ಲಿ ಮತ್ತಷ್ಟು ಅಣ್ವಸ್ತ್ರ ಸಿಡಿತಲೆ ಹಾಗೂ ಖಂಡಾಂತರ ಕ್ಷಿಪಣಿಗಳ ಉತ್ಪಾದನೆ ಹೆಚ್ಚಿಸುವಂತೆ ಆದೇಶಿಸಿದ್ದಾರೆ.

ಈಗಾಗಲೆ ವಿಶ್ವರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರಕೊರಿಯಾ ಮತ್ತೆ ತನ್ನ ಮೊಂಡುತನವನ್ನು ಮುಂದುವರಿಸಿದೆ. ಅಲ್ಲದೆ ಅಮೆರಿಕದ ಜೊತೆ ಯುದ್ಧ ಮಾಡಲು ಉತ್ಸಾಹ ತೋರುತ್ತಿದೆ.

ಹೊಸ ವರ್ಷದ ಮೊದಲೇ ದಿನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಕಿಮ್‌ ಎಚ್ಚರಿಕೆ ನೀಡಿದ್ದು, ಅಣ್ವಸ್ತ್ರದ ಬಟನ್‌ ನನ್ನ ಮೇಜಿನ ಮೇಲಿದೆ. ಎಚ್ಚರಿಕೆಯಿಂದಿರಿ ಎಂದು ಬೆದರಿಕೆ ಹಾಕಿದ್ದಾರೆ. ಉತ್ತರ ಕೊರಿಯಾದ ಬಳಿ ಅಣ್ವಸ್ತ್ರ ದಾಸ್ತಾನು ಇದೆ. ಅಮೆರಿಕದ ಬಹುಪಾಲು ಭಾಗವನ್ನು ನಿರ್ನಾಮ ಮಾಡುವ ಶಕ್ತಿ ನಮ್ಮ ದೇಶಕ್ಕಿಗೆ. ಅಣ್ವಸ್ತ್ರದ ಬಟನ್‌ ಸದಾ ನನ್ನ ಮೇಜಿನ ಮೇಲೆಯೇ ಇರುತ್ತದೆ. ಇದು ಬೆದರಿಕೆಯಲ್ಲ ವಾಸ್ತವ ಸಂಗತಿ ಎಂದಿದ್ದಾರೆ.

ಉತ್ತರ ಕೊರಿಯಾ ಬಹಳ ಜವಾಬ್ದಾರಿಯಿರುವ ರಾಷ್ಟ್ರ. ಜೊತೆಗೆ ಶಾಂತಿಪ್ರಿಯ ರಾಷ್ಟ್ರ ಸಹ ಹೌದು. ಎಲ್ಲಿಯವರೆಗೂ ನಮ್ಮ ವಿರುದ್ದ ಆಕ್ರಮಣಕಾರಿ ಮನೋಭಾವ ತಾಳುವುದಿಲ್ಲವೋ ಅಲ್ಲಿಯವರೆಗೂ ನಾವು ಅಣ್ವಸ್ತ್ರ ಬಳಕೆ ಮಾಡುವುದಿಲ್ಲ ಎಂದಿದ್ದಾರೆ.
ಡೊನಾಲ್ಡ್‌ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಉತ್ತರ ಕೊರಿಯಾದ ನಡೆಯನ್ನು ಖಂಡಸುತ್ತಲೇ ಬಂದಿದ್ದಾರೆ. ಇದರಿಂದ ಕೆರಳಿರುವ ಉತ್ತರ ಕೊರಿಯಾ ಬೇಕಂತಲೇ ಮತ್ತಷ್ಟು ಅಣ್ವಸ್ತ್ರ ಪರೀಕ್ಷೆ ಮಾಡುತ್ತಲೇ ಬಂದಿದ್ದು, ಈಗ ಅಮೆರಿಕಕ್ಕೆ ಕಠಿಣ ಎಚ್ಚರಿಕೆ ನೀಡಿದೆ.

Leave a Reply

Your email address will not be published.