ಹೃದಯಾಘಾತದಿಂದ ವಿಧಿವಶರಾದ ಮೈಸೂರು ಮೂಲದ ಪತ್ರಕರ್ತ ಅನೂಪ್‌ ಕುಮಾರ್‌

ಮೈಸೂರು : ಮೈಸೂರು ಮೂಲದ ಪತ್ರಕರ್ತ ಅನೂಪ್‌ ಕುಮಾರ್ (50) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಇವರು ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾನುವಾರ ಕುಟುಂಬ ಸಮೇತವಾಗಿ ಮನಾಲಿಗೆ ತೆರಳಿದ್ದರು. ಈ ವೇಳೆ ಹೃದಯಾಘಾತವಾಗಿದೆ. ಮನಾಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಸೋಮವಾರ ಸಂಜೆಯ ವೇಳೆಗೆ ಅನೂಪ್‌ ಅವರ ಮೃತದೇಹ ಸ್ವಗ್ರಾಮಕ್ಕೆ ಬರಲಿದೆ.

ಮೈಸೂರಿನ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮೈಸೂರಿನ ಗೋಕುಲಂ ಬಡಾವಣೆಯ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

ಮೈಸೂರಿನಲ್ಲಿ ಪತ್ರಕೋದ್ಯಮ ವೃತ್ತಿ ಆರಂಭಿಸಿದ್ದ ಅನೂಪ್‌, ಸಂಜೆ ಸಮಾಚಾರ್‌, ಆಂದೋಲನ್‌, ನ್ಯೂಸ್‌ 18, ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ದೆಹಲಿಯಲ್ಲಿ ಟೈಮ್ಸ್‌ ನೌ ಹಾಗೂ ಎನ್‌ಡಿಟಿವಿಯಲ್ಲಿ ಕೆಲಸ ಮಾಡಿದ್ದರು.

Leave a Reply

Your email address will not be published.