Interesting : ಮದುವೆ ಬಗ್ಗೆ ಕೈ ಹೇಳುತ್ತೆ ಭವಿಷ್ಯ…. : ನಿಮ್ಮ ವೈವಾಹಿಕ ಜೀವನ ಹೇಗಿರುತ್ತೆ ನೀವೇ ನೋಡಿ

ಹಸ್ತ ಸಾಮುದ್ರಿಕಾ ಶಾಸ್ತ್ರ ಬಹಳ ವಿಶೇಷವಾದ ಶಾಸ್ತ್ರವಾಗಿದೆ. ಅದರಲ್ಲಿ ಕೈ ನೋಡಿ ನಿಮ್ಮ ಭವಿಷ್ಯ ಏನು ಎಂಬುದನ್ನು ಕೂಲಂಕಷವಾಗಿ ಹೇಳುತ್ತಾರೆ. ಅದರಲ್ಲಿ ಮದುವೆ ಬಗ್ಗೆ ಹೇಳುವುದು ಸುಲಭ ಎನ್ನುತ್ತಾರೆ ಕಲಿತವರು. ಜೊತೆಗೆ ಇದು ಆಸಕ್ತಿದಾಯಕವೂ ಹೌದು.

ನಿಮ್ಮ ಕಿರುಬೆರಳಿನ ಕೆಳಗಿರುವ ರೇಖೆಗೆ ವಿವಾಹ ರೇಖೆ. ಅನೇಕ ರೀತಿಯಲ್ಲಿ ಈ ರೇಖೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಇರುತ್ತವೆ. ಇದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಸುಲಭ.

ಸಾಮಾನ್ಯವಾಗಿ ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ಪುರುಷರಿಗೆ ಎಡಗೈನ ರೇಖೆ ಮದುವೆ ಬಗ್ಗೆ ಹೇಳುತ್ತದೆ. ಮಹಿಳೆಯರಿಗೆ ಬಲಗೈನ ರೇಖೆ ಹೇಳುತ್ತದೆ. ಮದುವೆ ರೇಖೆ ಮೇಲ್ಮುಖವಾಗಿ ಬಾಗಿದ್ದರೆ ವೈವಾಹಿಕ ಜೀವನ ಸಂತೋಷದಿಂದ ಇರುತ್ತದೆ ಎನ್ನುತ್ತದೆ ಹಸ್ತ ಸಾಮುದ್ರಿಕಾ ಶಾಸ್ತ್ರ. ಅಂದರೆ ಮದುವೆ ವಿಚಾರವಾಗಿ ಚಿಂತೆ ಇರುವುದಿಲ್ಲ. ಕೌಟುಂಬಿಕ ಜೀವನ ಸಹ ಸಂತೋಷದಿಂದಿರುತ್ತದೆ. ನಿಮ್ಮ ಬಾಳ ಸಂಗಾತಿ ನಿಮ್ಮನ್ನು ಬಹಳ ಪ್ರೀತಿಸುತ್ತಾರೆ.

ಮದುವೆ ರೇಖೆ ಕೆಳಮುಖವಾಗಿ ಬಾಗಿದ್ದರೆ, ಮದುವೆ ವಿಚಾರದಲ್ಲಿ ಅಸಮಾಧಾನ ಇರುತ್ತದೆ. ಇಂಥಹವರ ಮದುವೆ ಜೀವನ ಯಶಸ್ವಿಯಾಗುವುದು ಕಷ್ಟ. ಕೆಳಮುಖವಾಗಿ ಬಾಗಿದಂತೆ ರೇಖೆ ಇದ್ದರೆ ಸಮಸ್ಯೆ ಹೆಚ್ಚಿರುತ್ತದೆ. ಈ ರೀತಿಯ ರೇಖೆ ಇರುವವರಿಗೆ ಮದುವೆ ಬಗ್ಗೆ ನಂಬಿಕೆಯೇ ಇರುವುದಿಲ್ಲ. ನಕಾರಾತ್ಮಕ ಭಾವನೆ ಅವರಲ್ಲಿರುತ್ತದೆ. ಇಂತಹವರು ಎಚ್ಚರಿಕೆಯಿಂದಿರಬೇಕು.
ಮದುವೆ ರೇಖೆ ಕೆಳಮುಖವಾಗಿ ಬಾಗಿ ಹೃದಯ ರೇಖೆಯನ್ನು ಛೇದಿಸಿದ್ದರೆ, ಅಂತಹವರಿಗೆ ವೈವಾಹಿಕ ಜೀವನದಲ್ಲಿ ಆಸಕ್ತಿ ಇರುವುದಿಲ್ಲ. ಪರ್ಯಾಯ ಆಲೋಚನೆಗಳು ಹೊಳೆಯುತ್ತಿರುತ್ತವೆ.


ಉಂಗುರದ ಬೆರಳನ್ನೂ ದಾಟಿ  ಮೇಲ್ಭಾಗದಿಂದ ಉದ್ದನೆಯ ರೇಖೆ ಮದುವೆ ರೇಖೆಯನ್ನು ಛೇದಿಸಿದ್ದರೆ , ಇಂತಹವರು ಬಾಳ ಸಂಗಾತಿ ಹೆಚ್ಚಿನ ಸಂಪತ್ತನ್ನು ಹೊಂದಿದವರಾಗಿರುತ್ತಾರೆ. ಮದುವೆ ಆದ ಬಳಿಕ ಇನ್ನೂ ಸಿರಿವಂತರಾಗುತ್ತಾರೆ.

ಒಂದಕ್ಕಿಂತ ಹೆಚ್ಚು ಮದುವೆ ರೇಖೆಗಳಿದ್ದರೆ ಪದ ಪದೇ ಒನ್‌ ವೇ ಪ್ರೀತಿ ಸಂಭವಿಸುತ್ತದಂತೆ.
ಒಂದಕ್ಕಿಂತ ಹೆಚ್ಚು ರೇಖೆಗಳು ಪರಸ್ಪರ ದಾಟಿ ಮುಂದೆ ಸಾಗಿದ್ದರೆ ಇಂತಹವರಿಗೆ ಪ್ರೀತಿಯ ವಿಚಾರದಲ್ಲಿ ಬೇಜವಾಬ್ದಾರಿ ಇರುತ್ತದೆ. ಸಹಾ ಹೊಸ ಸಂಗಾತಿಗಾಗಿ ಹುಡುಕಾಡುತ್ತಿರುತ್ತಾರೆ.

ಮದುವೆ ರೇಖೆ ಕೊನೆಯಲ್ಲಿ ಕವಲೊಡೆದಿದ್ದರೆ ಇಂತಹವರಿಗೆ ಬೇಗನೆ ವಿಚ್ಛೇದನವಾಗುವ ಸಾಧ್ಯತೆ ಇದೆ ಎಂದು ಶಾಸ್ತ್ರ ಹೇಳುತ್ತದೆ.

ಎರಡು ರೇಖೆಗಳು ಒಂದಾಗಿ ಸಾಗಿದ್ದರೆ. ಈ ರೀತಿಯ ವ್ಯಕ್ತಿಗಳಿಗೆ ಕಾರಣವೇ ಇಲ್ಲದೆ ಮದುವೆ ವಿಳಂಬವಾಗುತ್ತದೆ. ಇನ್ನೂ ಕೆಲವರಿಗೆ ಮದುವೆಯಾಗದೆ ಧೀರ್ಘಾವಧಿಯ ಸಂಬಂಧಗಳಲ್ಲಿರುತ್ತಾರೆ. ನಿಮ್ಮ ಸಂಗಾತಿಗೆ ಈ ರೀತಿಯ ಗೆರೆಗಳಿದ್ದರೆ ಮದುವೆ ವಿಳಂಬವಾಗುತ್ತದೆ.
ಮದುವೆ ರೇಖೆಯೇ ಇಲ್ಲದಿದ್ದರೆ ಅಂತಹವರಿಗೆ ಲೌಕಿಕ ಜೀವನದಲ್ಲಿ ಆಸಕ್ತಿ ಇರುವುದಿಲ್ಲ. ಒಂದು ವೇಳೆ ಮದುವೆಯಾದರೂ ಲೈಂಗಿಕ ಜೀವನದಲ್ಲಿ ಆಸಕ್ತಿ ಇರುವುದಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com