ಅಪ್ಪಾಜಿ, ಇಂದಿರಾ, ರಮ್ಯಾ ಆಯ್ತು ಈಗ BSY ಕ್ಯಾಂಟೀನ್ ಸರದಿ : ಕೇವಲ 3ರೂಗೆ ತಿಂಡಿ ಊಟ

ಮಂಡ್ಯ : ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಜನರನ್ನು ತಮ್ಮತ್ತ ಒಲಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಮೊದಲ ಬಾರಿಗೆ ಕಡಿಮೆ ದರದಲ್ಲಿ ಜನರಿಗೆ ಆಹಾರ ಸಿಗುವಂತೆ ಮಾಡಲು ಜೆಡಿಎಸ್‌ನ ಎಚ್‌.ಡಿ ದೇವೇಗೌಡರು ಅಪ್ಪಾಜಿ ಕ್ಯಾಂಟೀನ್‌ ಜಾರಿಗೆ ತಂದಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಸರ್ಕಾರ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಇಂದಿರಾ ಕ್ಯಾಂಟೀನ್‌ ಜಾರಿಗೆ ತಂದಿತ್ತು. ಅದಾದ ಬಳಿಕ ಮಂಡ್ಯದಲ್ಲಿ ಕುಮಾರಿ ರಮ್ಯಾ ಹೆಸರಿನಲ್ಲಿ ಅಭಿಮಾನಿಯೊಬ್ಬರು ಕ್ಯಾಂಟೀನ್‌ ನಿರ್ಮಿಸಿದ್ದರು.

ಇದೆಲ್ಲ ಮುಗಿದ ಬಳಿಕ ಈಗ ಮಾಜಿ ಸಿಎಂ ಯಡಿಯೂರಪ್ಪ ಅವರ ಹೆಸರಿನಲ್ಲಿ ಯಡಿಯೂರಪ್ಪಾಜಿ ಹೆಸರಿನಲ್ಲಿ ಕ್ಯಾಂಟೀನ್‌ ತೆರೆಯಲಾಗಿದೆ. ಕೇವಲ 3 ರೂಗೆ ಬೆಳಗ್ಗೆ ಉಪಹಾರ, ಮದ್ಯಾಹ್ನ ಊಟ ಹಾಗೂ ರಾತ್ರಿ ಊಟ, ಕಾಫಿ, ಟೀ, ಹಾಲು ಸಿಗಲಿದೆ. ಮಂಡ್ಯದಲ್ಲಿ ಸದ್ಯದಲ್ಲೇ ಈ ಕ್ಯಾಂಟೀನ್ ಪ್ರಾರಂಭವಾಗಲಿದ್ದು, ಹಂತಹಂತವಾಗಿ ರಾಜ್ಯಾದ್ಯಂತ ತೆರೆಯುವುದಾಗಿ ಯಡಿಯೂರಪ್ಪ ಅಭಿಮಾನಿಗಳ ಬಳಗ ಹೇಳಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com