ತ್ರಿವಳಿ ತಲಾಖ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಇಶ್ರತ್ ಜಹಾನ್ BJPಗೆ ಸೇರ್ಪಡೆ..

‘ ತ್ರಿವಳಿ ತಲಾಖ್ ನಿಷೇಧಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದ ಮುಸ್ಲಿಂ ಮಹಿಳೆ ಇಶ್ರತ್ ಜಹಾನ್ ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ ‘ ಎಂದು ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಾಯಂತನ್ ಬಾಸು ಸೋಮವಾರ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಹೌರಾದಲ್ಲಿ ಬಿಜೆಪಿ ಕಾರ್ಯಕರ್ತರು ಇಶ್ರತ್ ಅವರನ್ನು ಸನ್ಮಾನಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಇಶ್ರತ್ ಜಹಾನ್ ಅವರಿಗಾಗಿ ರಾಜ್ಯಮಟ್ಟದ ಅಭಿನಂದನಾ ಸಮಾರಂಭವನ್ನು ಏರ್ಪಡಿಸುವುದಾಗಿ ಸಾಯಂತನ್ ಬಸು ತಿಳಿಸಿದ್ದಾರೆ.

ತ್ರಿವಳಿ ತಲಾಖ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಐವರು ಮಹಿಳೆಯರಲ್ಲಿ ಇಶ್ರತ್ ಜಹಾನ್ ಕೂಡ ಒಬ್ಬರು. ದುಬೈನಲ್ಲಿ ನೆಲೆಸಿದ್ದ ಇಶ್ರತ್ ಜಹಾನ್ ಪತಿ, 2014 ರಲ್ಲಿ ಫೋನ್ ಮೂಲಕ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡಿದ್ದ.

 

Leave a Reply

Your email address will not be published.

Social Media Auto Publish Powered By : XYZScripts.com