ಉತ್ತರ ಭಾರತದ ಜನರನ್ನು ಕಂಗಾಲು ಮಾಡಿದ ದಟ್ಟ ಮಂಜು, ಚಳಿ : ವಿಮಾನ, ರೈಲು ಸೇವೆ ರದ್ದು

ದೆಹಲಿ : 2018ರ ಮೊದಲ ದಿನವಾದ ಇಂದು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಅನೇಕ ಕಡೆ ದಟ್ಟನೆಯ ಮಂಜು ಹಾಗೂ ಚಳಿ ಜನರನ್ನು ಕಂಗಾಲು ಮಾಡಿದೆ.

ಈ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು 50 ಮೀಟರ್‌ ಕಡಿಮೆ ದೂರದ ಗೋಚರತೆ ಕ್ಷೀಣವಾದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದ್ದು, ಸುಮಾರು 350 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.

ಜೊತೆಗೆ ರೈಲುಸೇವೆಯನ್ನೂ ಸ್ಥಗಿತಗೊಳಿಸಿದ್ದು, 56 ರೈಲುಗಳು ತಡವಾಗಿ ಹೊರಡಲಿದೆ. ಅಲ್ಲದೆ 15 ರೈಲುಗಳನ್ನು ರದ್ದು ಪಡಿಸಲಾಗಿದೆ. ದೆಹಲಿಯಲ್ಲಿಂದು ದಿನದ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯನ್‌ ದಾಖಲಾಗಿದ್ದು, ಗರಿಷ್ಠ ತಾಪಮಾನ 21ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com