Ranaji Cricket : ಫೈನಲ್ ನಲ್ಲಿ 9 ವಿಕೆಟ್ ಜಯ : ಮೊದಲ ಸಲ ಚಾಂಪಿಯನ್ ಆದ ವಿದರ್ಭ

ಇಂದೋರಿನ ಹೋಲ್ಕರ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ 9 ವಿಕೆಟ್ ಜಯ ಸಾಧಿಸಿದೆ. ಈ ಮೂಲಕ ಫೈಜ್ ಫಜಲ್ ನೇತೃತ್ವದ ವಿದರ್ಭ ತಂಡ ಮೊದಲ ಸಲ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸೋಮವಾರ ನಡೆ ನಾಲ್ಕನೇ ದಿನದಾಟದಲ್ಲಿ ದೆಹಲಿ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 280ಕ್ಕೆ ಆಲೌಟ್ ಆಯಿತು. ದೆಹಲಿ ಪರವಾಗಿ ನಿತಿಶ್ ರಾಣಾ 64, ಧ್ರುವ್ ಶೋರೆ 62, ಗೌತಮ್ ಗಂಭೀರ್ 36 ರನ್ ಗಳಿಸಿದರು. ವಿದರ್ಭ ಪರವಾಗಿ ಅಕ್ಷಯ್ ವಖಾರೆ 4, ಆದಿತ್ಯ ಸರವಟೆ 3, ರಜನೀಶ್ ಗುರ್ಬಾನಿ 2 ವಿಕೆಟ್ ಪಡೆದರು.

ದೆಹಲಿ ನೀಡಿದ 29 ರನ್ ಟಾರ್ಗೆಟ್ ಬೆನ್ನತ್ತಿದ ವಿದರ್ಭ 5 ಓವರುಗಳಲ್ಲಿ 1 ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿ ಜಯ ದಾಖಲಿಸಿತು. ವಿದರ್ಭ ಪರವಾಗಿ ವಾಸಿಮ್ ಜಾಫರ್ 17* ಹಾಗೂ ಸಂಜಯ್ ರಾಮಸ್ವಾಮಿ 9* ರನ್ ಗಳಿಸಿದರು. ಪಂದ್ಯದಲ್ಲಿ ಒಟ್ಟು 8 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ರಜನೀಶ್ ಗುರ್ಬಾನಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

 

Leave a Reply

Your email address will not be published.

Social Media Auto Publish Powered By : XYZScripts.com