WATCH : ಕೇಪ್ ಟೌನ್ ಬೀದಿಯಲ್ಲಿ ಕುಣಿದ Kohli-Dhawan : ಆಫ್ರಿಕನ್ ಹಾಡಿಗೆ ದೇಸಿ ಸ್ಟೆಪ್ಸ್..!

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ ಸಹ ಆಟಗಾರರಷ್ಟೇ ಅಲ್ಲ, ಉತ್ತಮ ಸ್ನೇಹಿತರೂ ಹೌದು. ದೆಹಲಿ ಮೂಲದವರಾದ ವಿರಾಟ್ ಹಾಗೂ ಧವನ್, ಕ್ರಿಕೆಟ್ ಸರಣಿ ಪ್ರಯುಕ್ತ ದಕ್ಷಿಣ ಆಫ್ರಿಕಾಗೆ ತೆರಳಿದ್ದಾರೆ. ಜನೆವರಿ 5 ರಿಂದ ಮೊದಲ ಟೆಸ್ಟ್ ಆರಂಭಗೊಳ್ಳಲಿದೆ.

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ನೆಟ್ಸ್ ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ನಡುವೆ ಸಿಕ್ಕ ಕೊಂಚ ಬಿಡುವಿನ ವೇಳೆಯಲ್ಲಿ ಕೊಹ್ಲಿ ಹಾಗೂ ಧವನ್ ದಕ್ಷಿಣ ಆಫ್ರಿಕಾ ರಾಜಧಾನಿ ಕೇಪ್ ಟೌನ್ ಬೀದಿಯಲ್ಲಿ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಸ್ಥಳೀಯ ಸಂಗೀತಗಾರರು ನುಡಿಸುತ್ತಿದ್ದ ಆಫ್ರಿಕನ್ ಹಾಡಿಗೆ, ಟೀಮ್ ಇಂಡಿಯಾ ಕ್ರಿಕೆಟಿಗರಿಬ್ಬರು ಪಂಜಾಬಿ ಭಾಂಗ್ಡಾ ಶೈಲಿಯಲ್ಲಿ ಹೆಜ್ಜೆ ಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com