ಹೊಸ ವರ್ಷದಂದು ಜನಿಸಿ 5 ಲಕ್ಷ ರೂ Gift ಪಡೆದ ಆ ಮಗು ಯಾರದ್ದು….ಇಲ್ಲಿದೆ ಡೀಟೆಲ್ಸ್‌

ಬೆಂಗಳೂರು : ಬಿಬಿಎಂಪಿ ಆಸ್ಪತ್ರೆಯಲ್ಲಿ ಹೊಸ ವರ್ಷದಂದು ಜನಿಸಿದ ಹೆಣ್ಣುಮಗುವಿಗೆ ಮೇಯರ್‌ ಸಂಪತ್ ರಾಜ್‌ 5 ಲಕ್ಷ ರೂನ ಚೆಕ್‌ ವಿತರಿಸಿದ್ದಾರೆ.

ಹೊಸ ವರ್ಷಾಚರಣೆ ನಿಮಿತ್ತ, ಹಾಗೂ ಹೆಣ್ಣು ಬ್ರೂಣ ಹತ್ಯೆ ತಡೆಯುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹೊಸ ವರ್ಷದಂದು ಬಿಬಿಎಂಪಿ ಪಾಲಿಕೆ ಆಸ್ಪತ್ರೆಯಲ್ಲಿ ಜನಿಸುವ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ನೀಡುವುದಾಗಿ ಘೋಷಿಸಿದ್ದರು. ಅದರಂತೆ ನಿನ್ನೆ ರಾಜಾಜಿನಗರದ ಭಾಷ್ಯಂ ಸರ್ಕಲ್‌ನ ಬಿಬಿಎಂಪಿ ಆಸ್ಪತ್ರೆಯಲ್ಲಿ ಗೋಪಿ ಹಾಗೂ ಪುಷ್ಪಾ ದಂಪತಿಗೆ ರಾತ್ರಿ 12.05ಕ್ಕೆ ಮಗು ಜನಿಸಿದ್ದು, ಈ ಮಗುವಿಗೆ 5 ಲಕ್ಷ ನೀಡಿದ್ದಾರೆ.

ಹೆಣ್ಣು ಮಕ್ಕಳನ್ನು , ಅವರ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಗಿಫ್ಟ್‌ ನೀಡಿರುವುದಾಗಿ ಹೇಳಿದ್ದಾರೆ. ಬಿಬಿಎಂಪಿ ಮೇಯರ್‌ ಹಾಗೂ ಮಗುವಿನ ಹೆಸರಿನ ಜಂಟಿ ಖಾತೆಯಲ್ಲಿ ಹಣವನ್ನು ಡೆಪಾಸಿಟ್‌ ಮಾಡಲಿದ್ದು, ಮಗುವಿನ ಉನ್ನತ ಶಿಕ್ಷಣಕ್ಕೆ ಇದು ಸಹಕಾರಿಯಾಗಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com