ಸಂಜೀವ್‌ ಎಂ ಪಾಟೀಲ್‌ ಸೇರಿದಂತೆ 28 IPS ಹಾಗೂ 11 IAS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ಅನೇಕ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳನ್ನು ವಿವಿಧ ಇಲಾಖೆಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಪಟ್ಟಿಯಲ್ಲಿ 11 ಮಂದಿ ಐಎಎಸ್‌ ಅಧಿಕಾರಿಗಳು ಹಾಗೂ 28 ಮಂದಿ ಐಪಿಎಸ್‌ ಅಧಿಕಾರಿಗಳ ಹೆಸರು ಸೇರ್ಪಡೆಯಾಗಿದೆ.
ಡಿಐಜಿ ಡಿ.ರೂಪಾ ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಯಾದ ಐಎಎಸ್‌ ಅಧಿಕಾರಿಗಳ ಪಟ್ಟಿ :
ಮಂಜುಳ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು. ಗುರುದತ್ತ ಹೆಗಡೆ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‌ ಸಿಇಒ, ನಳಿನ್‌ ಅತುಲ್‌, ಕೆಯುಐಡಿಎಫ್‌ಸಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕರು. ಪ್ರಶಾಂತ್ ಕುಮಾರ್‌ ಮಿಶ್ರಾ, ಕೊಡಗು ಜಿಲ್ಲಾ ಪಂಚಾಯತ್‌ ಸಿಇಒ. ಪಲ್ಲವಿ ಅಕ್ಕುರಾತಿ, ಡಿಪಿಎಆರ್‌ ಜಂಟಿ ಕಾರ್ಯದರ್ಶಿ, ಶಮ್ಲಾ ಇಕ್ಬಾಲ್‌, ಏಡ್ಸ್‌ ನಿಯಂತ್ರಣ ಸೊಸೈಟಿಯ ಯೋಜನಾ ನಿರ್ದೇಶಕರು. ಗಾರ್ಗಿ ಜೈನ್‌, ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತರು. ರಗುನಂದನ್‌ ಮೂರ್ತಿ, ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು. ಸಿ.ಟಿ ಶಿಲ್ಪಾ ನಾಥ್‌, ಹಾವೇರಿ ಜಿಲಲಾ ಪಂಚಾಯತ್‌ನ ಸಿಇಒ. ಜಿಆರ್‌ಜೆ ದಿವ್ಯಪ್ರಭಾ.
ವರ್ಗಾವಣೆಗೊಂಡ ಐಪಿಎಸ್‌ ಅಧಿಕಾರಿಗಳು :
ಕೆ.ಎಸ್‌.ಆರ್‌ ಚರಣ್‌ ರೆಡ್ಡಿ, ಎಡಿಜಿಪಿ, ಪೊಲೀಸ್‌ ತರಬೇತಿ. ರಾಮಚಂದ್ರರಾವ್‌, ಎಡಿಜಿಪಿ, ಕುಂದುಕೊರತೆ ಮತ್ತು ಮಾನವ ಹಕ್ಕುಗಳ ವಿಭಾಗ. ಮಾಲಿನಿ ಕೃಷ್ಣಮೂರ್ತಿ, ಎಡಿಜಿಪಿ ಸಂವಹನ ಸರಕು ಮತ್ತು ಆಧುನೀಕರಣ ವಿಭಾಗ. ಅಲೋಕ್‌ ಕುಮಾರ್, ಐಜಿಪಿ, ಉತ್ತರ ವಲಯ, ಬೆಳಗಾವಿ. ಬಿಜಯ್‌ ಕುಮಾರ್‌ ಸಿಂಗ್‌, ಐಜಿ ಮತ್ತು ಎಸಿಪಿ ಬೆಂಗಳೂರು ಪಶ್ಚಿಮ ವಲಯ. ಎಸ್‌.ಮುರುಗನ್‌, ಐಜಿಪಿ, ಈಶಾನ್ಯ ವಲಯ ಕಲಬುರ್ಗಿ, ಕೆ.ವಿ ಶರತ್ಚಂದ್ರ, ಐಜಿಪಿ ಪೂರ್ವವಲಯ ದಾವಣಗೆರೆ. ಸೋಮೇಂದ್ರ ಮುಖರ್ಜಿ, ಐಜಿಪಿ ಲೋಕಾಯುಕ್ತ. ಎನ್‌.ಶಿವಪ್ರಸಾದ್‌, ಐಜಿಪಿ,ಬಳ್ಳಾರಿ ವಲಯ, ಸಂದೀಪ್‌ ಪಾಟೀಲ್, ಡಿಐಜಿ ರಾಜ್ಯ ಮೀಸಲು ಪಡೆ. ಡಾ.ಪಿ.ಎಸ್‌ ಹರ್ಷ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಕಮಿಷನರ್‌. ವಿಕಾಸ್ ಕುಮಾರ್‌, ಸಮಾಜ ಕಲ್ಯಾಣ ವಿಭಾಗದ ಕಮಿಷನರ್‌. ಟಿ.ಡಿ ಪವಾರ್‌, ಭ್ರಷ್ಟಾಚಾರ ನಿಗ್ರಹ ದಳ, ಡಿಐಜಿ. ಅಣ್ಣಗೆರೆ ಮಂಜುನಾಥ್‌, ನಾಗರಿಕೆ ಹಕ್ಕು ಜಾರಿ ನಿರ್ದೇಶನಾಲಯ ವಿಭಾಗದ ಡಿಐಜಿ. ರವಿ ಕುಮಾರ್‌ ಎಚ್‌.ನಾಯಕ್‌, ವಿಚಕ್ಷಣ ವಿಭಾಗದ ಡಿಐಜಿ. ರಮೇಶ್‌, ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣಾ ಅಕಾಡೆಮಿ ಕಮಾಂಡಂಟ್. ಭೂಷಣೆ ಜಿ ಬೊರಾಸೆ, ಎಸ್‌.ಪಿ ಭ್ರಷ್ಟಾಚಾರ ನಿಗ್ರಹ ದಳ. ವರ್ತಿಕ್‌ ಕಟಿಯಾರ್‌, ಡಸಿಪಿ ನಗರ ಸಶಸ್ತ್ರಮ ಮೀಸಲು ಪಡೆ. ಕುಲದೀಪ್‌ ಕುಮಾರ್‌ ಆರ್‌ ಜೈನ್‌, ಎಸ್‌ಪಿ ಜಾಗೃತದಳ. ಹರೀಶ್‌ ಪಾಂಡೆ, ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಅಕಾಡೆಮಿ, ಡೆಪ್ಯುಟಿ ಕಮಾಂಡೆಂಟ್ ಜನರಲ್‌. ನಿಶಾ ಜೇಮ್ಸ್‌, ಕಮಾಂಡೆಂಟ್ ಇಂಡಿಯಾ ರಿಸರ್ವಡ್‌ ಬೆಟಾಲಿಯನ್, ಮುನಿರಾಬಾದ್‌. ಕೋನಾ ವಂಶಿಕೃಷ್ಣ, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್‌ ಅಕಾಡೆಮಿ. ಲಕ್ಷ್ಮಣ ನಿಂಬರಗಿ, ಎಸ್‌ಪಿ ಉಡುಪಿ. ಶಿವಪ್ರಕಾಶ್‌ ದೇವರಾಜ್‌, ಸಹಾಯಕ ಐಜಿಪಿ. ಬಿ.ಎಸ್‌ ಲಕ್ಷ್ಮಿ ಪ್ರಸಾದ್‌, ವಿಜಯಪುರ ಎಸ್‌ಪಿ. ಕೆ.ಅರುಣ್, ವಿಶೇಷ ತನಿಖಾ ತಂಡ, ಲೋಕಾಯುಕ್ತ. ಎಂ.ಎಸ್‌ ಮಹಮ್ಮದ್‌ ಸುಜಿತಾ, ಲೋಕಾಯುಕ್ತ ವಿಶೇಷ ತನಿಖಾ ತಂಡದ ಎಸ್‌ಪಿ. ಸಂಜೀವ್‌ ಎಂ.ಪಾಟೀಲ್, ಬೆಂಗಳೂರು ಆಡಳಿತ ಡಿಸಿಪಿ.

Leave a Reply

Your email address will not be published.

Social Media Auto Publish Powered By : XYZScripts.com