ಮ್ಯಾಗಝೀನ್‌ Cover pageನಲ್ಲಿ ಪ್ರಭಾಸ್‌ : Dashing lookನಲ್ಲಿ ಕಾಣಿಸಿಕೊಂಡ ಬಾಹುಬಲಿ

ಬಾಹುಬಲಿ ಸಿನಿಮಾದ ಮೂಲಕ ಹೆಣ್ಣು ಮಕ್ಕಳ ಹೃದಯಕ್ಕೆ ಲಗ್ಗೆ ಇಟ್ಟಿದ್ದ ಸ್ಟಾರ್‌ ಪ್ರಭಾಸ್‌ ಈಗ ಮತ್ತೊಂದು ಸಖತ್‌ ಲುಕ್‌ನಲ್ಲಿ ಮಿಂಚಿದ್ದಾರೆ. GQ India ಮ್ಯಾಗಝೀನ್‌ನ ಹೊಸ ವರ್ಷದ ಮೊದಲ ಆವೃತ್ತಿಯಲ್ಲಿ ಪ್ರಭಾಸ್‌ ಡ್ಯಾಶಿಂಗ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಹುಬಲ ಬಳಿಕ ಪ್ರಭಾಸ್‌ಗೆ ಬೇಡಿಕೆ ಹೆಚ್ಚಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಂತೆ ಮ್ಯಾಗಝೀನ್‌ನ ಕವರ್‌ ಪೇಜ್‌ನಲ್ಲಿ ಪ್ರಭಾಸ್‌ ಸಖತ್‌ ಹ್ಯಾಂಡ್‌ಸಮ್‌ ಆಗಿ ಕಾಣಿಸಿಕೊಂಡಿದ್ದಾರೆ.

ರಾಯಲ್‌ ಬ್ಲ್ಯೂ ಬಣ್ಣದ ಸೂಟ್‌ ಪ್ರಭಾಸ್‌ಗೆ ಮೆಚ್ಚುಗೆಯಾಗಿದೆ. ತಾನ್ಯಾ ವೋಹ್ರಾ ಎಂಬ ವಸ್ತ್ರ ವಿನ್ಯಾಸಕರೊಬ್ಬರು ಬಾಹುಬಲಿಗೆ ಈ ಡ್ರೆಸ್‌ ಡಸೈನ್ ಮಾಡಿದ್ದಾರೆ.

ರಾಯಲ್ ಬ್ಲೂ ಬಣ್ಣದ ಪಿನ್ ಸ್ಟ್ರಿಪ್ಟ್ಡ್ 3 ಪೀಸ್ ಸೂಟ್, ಬಾಹುಬಲಿಗೆ ಚೆನ್ನಾಗಿ ಒಪ್ಪಿದೆ. ಅದಕ್ಕೆ ಮ್ಯಾಚಿಂಗ್ ಟೈ ಕೂಡ ಧರಿಸಿದ್ದಾರೆ. ತಾನ್ಯಾ ವೋಹ್ರಾ ಪ್ರಭಾಸ್ ಗೆ ಈ ಲುಕ್ ಕೊಟ್ಟಿದ್ದಾರಂತೆ. ಸದ್ಯ ಸುಜೀತ್ ರೆಡ್ಡಿ ಅವರ ಸಾಹೋ ಚಿತ್ರದಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com