ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ಶಿಕ್ಷಕ : ಇದಕ್ಕೆ SP ಅಣ್ಣಾಮಲೈ ಮಾಡಿದ್ದೇನು….?

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ದಾಖಲಾಗಿದೆ. ಕಾಲೇಜು ಪ್ರಿನ್ಸಿಪಲ್‌ ಒಬ್ಬ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಆರೋಪಿ ಹೆಸರು ಪರಮೇಶ್‌ ಎಂದು ತಿಳಿದುಬಂದಿದೆ. ಆತ ಈ ಹಿಂದೆ ಸಹ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಈತನ ವಿರುದ್ದ ಪ್ರಕರಣ ದಾಖಲಾಗಿತ್ತು. ಪರಮೇಶ್‌ 3 ವರ್ಷಗಳ ಹಿಂದೆ ಹೆಂಡತಿಯನ್ನು ಕೊಲೆ ಮಾಡಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ. ಈಗ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಈದ್ ಮಿಲಾದ್‌ ಹಬ್ಬದ ದಿನ ಸ್ಪೆಷಲ್‌ ಕ್ಲಾಸ್‌ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಕಾಲೇಜಿಗೆ ಕರೆಸಿಕೊಂಡಿದ್ದ.

ಕ್ಲಾಸ್‌ ರೂಮಿನಲ್ಲಿ ವಿದ್ಯಾರ್ಥಿನಿ ಒಬ್ಬಳೇ ಇದ್ದ ಕಾರಣ ಆಕೆಯ ಜೊತೆ ಪರಮೇಶ್‌ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಬಳಿಕ ವಿದ್ಯಾರ್ಥಿನಿ ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಅವರಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ವಿದ್ಯಾರ್ಥಿನಿ ಜೊತೆ ಮಾತನಾಡಿರುವ ಅಣ್ಣಾಮಲೈ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲ ದೂರು ಕೊಡಿಸಿದ್ದಾರೆ.

ಮಹಿಳಾ ಪೊಲೀಸರು ಆರೋಪಿ ಪರಮೇಶ್‌ನನ್ನು ಬಂಧಿಸಿದ್ದು, ಆತನ ವಿರುದ್ದ 354, 376 ಹಾಗೂ 511 ಸೆಕ್ಷನ್‌ ಅಡಿ ಕೇಸ್‌ ದಾಖಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com