ರವಿಮಾಮನ ಕೃಷ್ಣಾವತಾರ : Viral ಆಯ್ತು ಕ್ರೇಜಿಸ್ಟಾರ್‌ನ ಹೊಸ Look

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರೇಮಿಗಳ ಗುರುವಾಗಿ, ಲವರ್‌ ಬಾಯ್‌ ಆಗಿ, ಹಠವಾದಿಯಾಗಿ ಮಿಂಚಿ ಅಭಿಮಾನಿಗಳ ಮನಗೆದ್ದಿದ್ದ ರವಿಚಂದ್ರನ್ ಈಗ ಸ್ಯಾಂಡಲ್ ವುಡ್‌ನಲ್ಲಿ ಕುರುಕ್ಷೇತ್ರದ ಕೃಷ್ಣನಾಗಿ ಮಿಂಚುತ್ತಿದ್ದಾರೆ.

ಹೌದು ಇಷ್ಟು ದಿನ ಕ್ರೇಜಿಸ್ಟಾರ್‌ ಎಂಬ ಪಟ್ಟ ಧರಿಸಿದ್ದ ರವಿಚಂದ್ರನ್‌ ಮೊಟ್ಟ ಮೊದಲ ಬಾರಿಗೆ ಪೌರಾಣಿಕ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಶನ್‌ ಅವರ 50ನೇ ಸಿನಿಮಾ ಕುರುಕ್ಷೇತ್ರದಲ್ಲಿ ರವಿಮಾಮ ಕೃಷ್ಣನ ವೇಷಧಾರಿಯಾಗಿದ್ದ ಅದರ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.

  

ರವಿಚಂದ್ರನ್‌ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆ ಪಾತ್ರದಲ್ಲಿ ರವಿಚಂದ್ರನ್ ಅವರನ್ನು ಊಹಿಸಲು ಸಾಧ್ಯವಾಗದ ರೀತಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೃಷ್ಣನ ಅವತಾಯ ಸಖತ್‌ ವೈರಲ್‌ ಆಗಿದೆ. ಅಲ್ಲದೆ ಈ ಪಾತ್ರಕ್ಕಾಗಿ ರವಿಚಂದ್ರನ್‌ ಬರೋಬ್ಬರಿ 8 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಅಲ್ಲದೆ ಮೀಸೆ ಸಹ ತೆಗೆದಿದ್ದು, ಅವರನ್ನು ಕಂಡು ಹಿಡಿಯುವುದೇ ಕಷ್ಟ ಎಂಬಂತಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com