ಇನ್ಮುಂದೆ ಮಹಿಳೆಯರು ಏಕಾಂಗಿಯಾಗಿ ಹಜ್‌ ಯಾತ್ರೆಗೆ ಹೋಗಬಹುದು : mann ki Baat ನಲ್ಲಿ ಮೋದಿ

ದೆಹಲಿ : 2017ರ ವರ್ಷ ಮುಗಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಕೊನೆಯ ಮನ್‌ ಕಿ ಬಾತ್‌ ನಲ್ಲಿ ಮಾತನಾಡಿದ್ದು, ನವ ಭಾರತದ ನಿರ್ಮಾಣಕ್ಕೆ ಕೈ ಜೋಡಿಸುತ್ತಿರುವ ಎಲ್ಲಾ ಮತದಾರರಿಗೂ ಸ್ವಾಗತ ಕೋರಿದ್ದಾರೆ.

ನಾಳೆ ಜನವರಿ 1. ಬಹಳ ವಿಶೇಷ ದಿನ. ಈ ವೇಳೆ ನವ ಭಾರತ ನಿರ್ಮಾಣಕ್ಕಾಗಿ ಕೈಜೋಡಿಸುತ್ತಿರುವ ಎಲ್ಲಾ ಹೊಸ ಮತದಾರರಿಗೂ ನಾನು ಸ್ವಾಗತ ಕೋರುತ್ತೇನೆ ಎಂದು ತಮ್ಮ ಮನ್‌ ಕಿ ಬಾತ್‌ನ 39ನೇ ಸರಣಿಯಲ್ಲಿ ಮಾತನಾಡಿರುವ ಮೋದಿ, ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ಹೆಚ್ಚು ಅಧಿಕಾರವಿದೆ. ನಮ್ಮ ದೇಶವನ್ನು ಬದಲಿಸಲು, ನವ ಭಾರತ ನಿರ್ಮಿಸಲು ಹೊಸ ಮತದಾರರು ನಮಗೆ ಸಾಥ್ ನೀಡುತ್ತಾರೆಂಬ ಭರವಸೆ ಇರುವುದಾಗಿ ಹೇಳಿದ್ದಾರೆ.

ಯುವಕರು ರಾಜಕೀಯದಲ್ಲಿ ಪಾಲ್ಗೊಳ್ಳಬೇಕು. ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುವಂತಾಗಬೇಕು. ದೇಶವನ್ನು ಬದಲಿಸುವುದರ ಕುರಿತು ಎಲ್ಲಾ ಯುವಕರು ಚರ್ಚೆ ನಡೆಸಬೇಕು. ಅದಕ್ಕಾಗಿ ದುಡಿಯಬೇಕು. ಇದಕ್ಕಾಗಿ ಯುವಜನತೆ ನಮಗೆ ಸಹಕಾರ ನೀಡಬೇಕು ಎಂದಿದ್ದಾರೆ. ನಮ್ಮ ಯುವಜನತೆ ದೇಶಕ್ಕೆ ಸ್ಪೂರ್ತಿಯಿದ್ದಂತೆ ಎಂದಿರುವ ಮೋದಿ, ಜಮ್ಮುಕಾಶ್ಮೀರದಲ್ಲಿ ಮಾತನಾಡಿದ್ದ ಮಕ್ಕಳನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಜೀವನದ ಬಗ್ಗೆ ಅವರಲ್ಲಿರುವ ವಿಶ್ವಾಸದ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸ್ವಚ್ಛ ಭಾರತ ಅಭಿಯಾನದ ಕುರಿತು ಮಾತನಾಡಿರುವ ಮೋದಿ, ಜನವಿ 4ರಿಂದ 10ರವರೆಗೆ ಸಮೀಕ್ಷೆ ನಡೆಸಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ತ್ರಿವಳಿ ತಲಾಖ್‌ ಕುರಿತು ಮಾತನಾಡಿದ್ದು, ಇಷ್ಟು ದಿನ ಪುರುಷರ ನೆರವಿಲ್ಲದೆ ಮುಸ್ಲಿಂ ಮಹಿಳೆಯರು ಹಜ್‌ ಯಾತ್ರೆಗೆ ಹೋಗುವಂತಿರಲಿಲ್ಲ. ಆದರೆ ಇನ್ನುಮುಂದೆ ಆ ರೀತಿ ಆಗುವುದಿಲ್ಲ. ಮಹಿಳೆಯೊಬ್ಬರೇ ಏಕಾಂಗಿಯಾಗಿ ಹಜ್‌ ಯಾತ್ರೆಗೆ ಹೋಗುವ ಅವಕಾಶವಿದೆ. ದೇಶಕ್ಕೆ ಸ್ವತಂತ್ರ ಬಂದು 70 ವರ್ಷ ಕಳೆದರೂ ಈ ಅಸಮಾನತೆ ಹೋಗಿರಲಿಲ್ಲ. ಈ ರೀತಿಯ ಅಸಮಾನತೆ ಮುಂದುವರಿಸುವುದು ಸರಿಯಲ್ಲ. ಹಜ್‌ ಯಾತ್ರೆಗೆ ತೆರಳುವ ಮಹಿಳೆಯರಿಗೆ ವಿಶೇಷ ವಿನಾಯ್ತಿ ನೀಡಲಾಗುತ್ತದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com