ನಟ- ನಟಿಗೂ ಕಾಡಿದ ನೈತಿಕ ಪೊಲೀಸ್‌ಗಿರಿ : ಮಂಗಳೂರಿನಲ್ಲಿ ಮತ್ತೊಂದು ಪ್ರಕರಣ ದಾಖಲು

ಮಂಗಳೂರು : ತಮಿಳು ಚಿತ್ರನಟಿ ಅನುಷಾ ಅವರ ಜೊತೆ ಕುಕ್ಕೆ ಸುಬ್ರಮಣ್ಯಕ್ಕೆ ಆಗಮಿಸಿದ್ದ ಮುಸ್ಲಿಂ ಯವಕನ ಮೇಲೆ ಹಿಂದು ಸಂಘಟನೆಯ ಕಾರ್ಯಕರ್ತರು ನೈತಿಕ ಪೊಲೀಸ್‌ ಗಿರಿ ನೆಪದಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಟಿ ಜೊತೆ ಇದ್ದ ಮುಸ್ಲಿಂ ಯುವಕನನ್ನು ಪರ್ವೇಜ್‌ ಎಂದು ಗುರುತಿಸಲಾಗಿದೆ. ಡಿಸೆಂಬರ್‌ 21ರಂದು ಘಟನೆ ನಡೆದಿದ್ದು, ಸುಬ್ರಮಣ್ಯ ಠಾಣೆ ಪೊಲೀಸರು ಸಹ ಪರ್ವೇಜ್‌ ಮೇಲೆ ಹಲ್ಲೆ ಮಾಡಿರುವುದಾಗಿ ನಟಿ ಅನುಷಾ ಆರೋಪಿಸಿದ್ದಾರೆ. ಈ ಕುರಿತು ಲೈವ್‌ ಸಂದೇಶ ಪ್ರಕಟಿಸಿರುವ ಅನುಷಾ, ತಾನು ಪೂಜೆಗೆಂದು ಕುಕ್ಕೆ ಸುಬ್ರಮಣ್ಯಕ್ಕೆ ಬಂದದ್ದೆ. ಪರ್ವೇಜ್‌ ನನ್ನ ಸ್ನೇಹಿತ ಅಷ್ಟೇ. ನಮ್ಮಿಬ್ಬರ ಸ್ನೇಹ ಬಿಟ್ಟು ಇನ್ಯಾವುದೇ ಸಂಬಂಧವಿಲ್ಲ. ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಹೇಳಿದ್ದರೂ ಪರ್ವೇಜ್‌ ಹಾಗೂ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಪರ್ವೇಜ್‌ಗೆ ಮೊದಲೇ ಆ್ಯಕ್ಸಿಡೆಂಟ್‌ ಆಗಿತ್ತು. ಅದನ್ನೂ ಲೆಕ್ಕಿಸದೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com