ಮತ್ತೆ love ನಲ್ಲಿ ಬಿದ್ದಿದ್ದಾರಂತೆ ಕಿರಿಕ್‌ ಪಾರ್ಟಿ ರಕ್ಷಿತ್‌ ಶೆಟ್ಟಿ……..ಅದ್ಯಾರು?

ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡ ರಕ್ಷಿತ್‌ ಶೆಟ್ಟಿ, ಅದೇ ಸಿನಿಮಾದ ನಾಯಕಿಯಾಗಿದ್ದ ರಶ್ಮಿಕಾ ಮಂದಣ್ಣ ಅವರನ್ನು ಲವ್‌ ಮಾಡುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈಗ ರಶ್ಮಿಕಾ ಹಾಗೂ ಗಣೇಶ್‌ ಅಭಿನಯದ ಚಮಕ್ ಚಿತ್ರ ರಿಲೀಸ್‌ ಆಗಿದ್ದು ಇದನ್ನು ನೋಡಿ ರಶ್ಮಿಕಾ ಮೇಲೆ ರಕ್ಷಿತ್‌ಗೆ ಮತ್ತೆ ಲವ್‌ ಆಗಿದೆಯಂತೆ.

ಹೀಗಂತ ಸ್ವತಃ ರಕ್ಷಿತ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ. ರಕ್ಷಿತ್‌ ಹಾಗೂ ರಶ್ಮಿಕಾ ಎಂಗೇಜ್‌ಮೆಂಟ್‌ ಬಳಿಕ ರಶ್ಮಿಕಾ ಅವರ ಎರಡು ಸಿನಿಮಾಗಳು ಡಿಸೆಂಬರ್‌ನಲ್ಲಿ ರಿಲೀಸ್‌ ಆಗಿವೆ. ಅಂಜನೀಪುತ್ರ ಹಿಟ್ ಆಗಿರುವ ವೇಳೆಯೇ ಚಮಕ್‌ ಚಿತ್ರ ರಿಲೀಸ್‌ ಆಗಿದ್ದು, ರಶ್ಮಿಕಾ ಅವರ ಆ್ಯಕ್ಟಿಂಗ್ ನೋಡಿ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ.

ಚಮಕ್‌ ಚಿತ್ರದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ಇದೊಂದು ಅದ್ಭುತ ಸಿನಿಮಾ. ಪೂರ್ತಿ ಸಿನಿಮಾ ಬಹಳ ಇಷ್ಟ ಆಯಿತು. ಗಣೇಶ್‌ ಸರ್‌ ಅವರ ಅಭಿನಯ ಸಹ ಟಾಪ್‌ ಕ್ಲಾಸ್‌ ಆಗಿದೆ. ರಶ್ಮಿಕಾ ನೋಟ ಬಹಳ ಆಕರ್ಷಕವಾಗಿದೆ. ಒಟ್ಟಿನಲ್ಲಿ ಚಮಕ್‌ ಚಿತ್ರ ನೋಡಿದ ಬಳಿಕ ರಶ್ಮಿಕಾ ಅವರ ಮೇಲ ಮತ್ತೊಮ್ಮೆ ಲವ್‌ ಆಗಿದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com