ಪ್ರಾಣ ಹೋದರೂ ಮಹದಾಯಿ ಹೋರಾಟ ನಿಲ್ಲುವುದಿಲ್ಲ : ವೀರೇಶ್ ಸೊಬರದಮಠ

ಗದಗ : ತಮ್ಮ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ ಪ್ರತಿಕ್ರಿಯೆ ನೀಡಿದ್ದಾರೆ. ‘ ಯಾರಿಗೂ ಹೆದರುವ ಪ್ರಶ್ನೆ ಇಲ್ಲ. ಪ್ರಾಣ ಹೋದ್ರು ಹೋರಾಟ ನಿಲ್ಲಲ್ಲ ‘ ಎಂದಿದ್ದಾರೆ.

‘ ಇವತ್ತಿನ ಘಟನೆ ಏನಾಗಿದೆಯೋ ಗೋತ್ತಿಲ್ಲ. ಕೆಟ್ಟ ಗಳಿಗೆ ನಡಿದುಹೋಗಿದೆ. ನಮಗೆ ನೀರು ಬೇಕು ಹೋರಾಟ ಮಾಡ್ತೀವಿ. ಏನೇ ಆದ್ರೂ ಸಂತೋಷ, ದುಃಖ ಎಲ್ಲವೂ ನುಂಗಬೇಕಾಗಿದೆ. ಮಹದಾಯಿ ಹೋರಾಟಕ್ಕೆ ಪ್ರಾಣವೇ ಪಣಕ್ಕಿಟ್ಟಿದ್ದೇವೆ. ನೀರು ಬರುವ ಸಮಯದಲ್ಲಿ ಇಂಥ ಸಮಸ್ಯೆಗಳು ನುಂಗಬೇಕಾಗಿದೆ. ಯಾರೂ ಏನೇ ಹೇಳಲಿ ನಾಡಿನ ಜನ್ರಿಗೆ ಗೊತ್ತಿದೆ ‘

‘ ಯಡಿಯೂರಪ್ಪ ಮಾತು ಕೊಟ್ಟಿದ್ರು. ಮಾತು ತಪ್ಪಿದ್ದಕ್ಕೆ ಹೋರಾಟ ಮಾಡಿದ್ದೇವೆ. ಆಗಲ್ಲ ಅಂದ್ರು ವಾಪಸ್ ಬಂದಿದ್ದೇವೆ. ಯಡಿಯೂರಪ್ಪ ಅವ್ರ ಬಗ್ಗೆ ಏನು ಮಾತಾಡದಿದ್ರು ಆರೋಪ ಮಾಡ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಜನೇವರಿವರೆಗೂ ಗಡುವು ನೀಡಿದ್ದೇವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಒಪ್ಪಿಸಬೇಕು ‘

‘ ಸರ್ವಪಕ್ಷ ಸಭೆ ಕರೆದು ದೆಹಲಿಗೆ ನಿಯೋಗ ಕರೆದೊಯ್ದು ಸಮಸ್ಯೆ ಇತ್ಯರ್ಥ ಮಾಡಬೇಕು. ಸಮಸ್ಯೆ ಇತ್ಯರ್ಥ ಮಾಡದಿದ್ರೆ ಹೋರಾಟ ಮುಂದುವರೆಯುತ್ತೆ ‘ ಮಹದಾಯಿ ಹೋರಾಟಗಾರ ವಿರೇಶ್ ಸೊಬರದಮಠ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com