Ranaji Final : ಅಕ್ಷಯ್ ವಾಡ್ಕರ್ ಶತಕ : ಬೃಹತ್ ಮೊತ್ತ ಕಲೆಹಾಕಿದ ವಿದರ್ಭ

ಇಂದೋರ್ ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ಮಹತ್ವದ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ವಿದರ್ಭ 7 ವಿಕೆಟ್ ಕಳೆದುಕೊಂಡು 528 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಮೂಲಕ ವಿದರ್ಭ 233 ರನ್ನುಗಳ ಮುನ್ನಡೆ ಪಡೆದುಕೊಂಡಿದೆ.

ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ವಿದರ್ಭ ಆಟಗಾರ ಅಕ್ಷಯ್ ವಾಡ್ಕರ್ ಅಮೋಘ ಶತಕ ಬಾರಿಸಿದರು. 243 ಎಸೆತಗಳನ್ನೆದುರಿಸಿ 16 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ ಅಕ್ಷಯ್, 133 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ತಾಳ್ಮೆಯಿಂದ ಬ್ಯಾಟ್ ಬೀಸಿದ ಆದಿತ್ಯ ಸರವಟೆ 79 ರನ್ ಗಳಿಸಿ ಔಟಾದರು. ಸಿದ್ದೇಶ್ ನೇರಲ್ 56 ರನ್ ಗಳಿಸಿ ನಾಟೌಟ್ ಆಗುಳಿದಿದ್ದಾರೆ.

ದೆಹಲಿ ಪರವಾಗಿ ನವದೀಪ್ ಸೈನಿ 3, ಆಕಾಶ್ ಸುದಾನ್ 2 ವಿಕೆಟ್ ಪಡೆದರು. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು, ವಿದರ್ಭ ತಂಡ ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ಕನಸು ಕಾಣಲಾರಂಭಿಸಿದೆ.

Leave a Reply

Your email address will not be published.