ದ್ರಾವಿಡ್ ಜೊತೆಗೆ ಹಫೀಜ್ Selfie : ‘ವಾಲ್’ ಬಗ್ಗೆ ಪಾಕ್ ಫ್ಯಾನ್ಸ್ ಹೇಳಿದ್ದೇನು..?

ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್ ಪ್ರಯುಕ್ತ, ಭಾರತದ ಕಿರಿಯರ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್, ತಂಡದೊಂದಿಗೆ ನ್ಯೂಜಿಲೆಂಡ್ ಗೆ ತೆರಳಿದ್ದಾರೆ. ನ್ಯೂಜಿಲೆಂಡಿಗೆ ದ್ರಾವಿಡ್ ತೆರಳುತ್ತಿದ್ದ ವಿಮಾನದಲ್ಲಿಯೇ ಪ್ರಯಾಣಿಸುತ್ತಿದ್ದ ಪಾಕ್ ಕ್ರಿಕೆಟರ್ ಮೊಹಮ್ಮದ್ ಹಫೀಜ್ ಅವರನ್ನು ಭೇಟಿಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ದ್ರಾವಿಡ್ ಜೊತೆಗೆ ಸೆಲ್ಫೀ ಕ್ಲಿಕ್ ಮಾಡಿದ ಪಾಕ್ ಕ್ರಿಕೆಟರ್ ಹಫೀಜ್, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕ್ ಅಭಿಮಾನಿಗಳು, ‘ ರಾಹುಲ್ ದ್ರಾವಿಡ್ ಒಬ್ಬ ಶ್ರೇಷ್ಟ ಕ್ರಿಕೆಟರ್ ಮಾತ್ರವಲ್ಲ, ಶ್ರೇಷ್ಟ ವ್ಯಕ್ತಿ ಕೂಡ ಹೌದು ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com