ತಮಿಳುನಾಡಿಗೆ ಒಬ್ಬರೇ MGR, ಒಬ್ಬರೇ ಅಮ್ಮ, ರಜಿನಿ ಹವಾ ಇಲ್ಲಿ ನಡೆಯಲ್ಲ : TTV ದಿನಕರನ್‌

ಚೆನ್ನೈ : ತಮಿಳುನಾಡಿಗೆ ಇರುವುದು ಒಬ್ಬರೇ ಎಂಜಿಆರ್‌, ಒಬ್ಬರೇ ಅಮ್ಮ ಅದು ಜಯಲಲಿತಾ. ರಜಿನಿ ಮೇನಿಯಾ ಇಲ್ಲಿ ನಡೆಯಲ್ಲ ಎಂದು ಎಐಎಡಿಎಂಕೆಯ ನಾಯಕ ಟಿಟಿವಿ ದಿನಕರನ್‌ ಹೇಳಿದ್ದಾರೆ.

ತಮಿಳಿನ ಸೂಪರ್‌ ಸ್ಟಾರ್ ರಜಿನೀಕಾಂತ್‌ ರಾಜಕೀಯ ಪ್ರವೇಶ ಕುರಿತು ಮಾತನಾಡಿದ ದಿನಕರನ್‌, ತಮಿಳುನಾಡಿನಲ್ಲಿ ರಜಿನಿ ಮೇನಿಯಾ ನಡೆಯುವುದಿಲ್ಲ. ತಮಿಳುನಾಡಿಗೆ ಒಬ್ಬರೇ ಎಂಜಿಆರ್‌, ಒಬ್ಬರೇ ಅಮ್ಮ. ಅವರೊಂದಿಗೆ ಯಾರನ್ನೂ ಹೋಲಿಕೆ ಮಾಡಬೇಡಿ. ಜಯಲಲಿತಾ ಅವರ ನಿಷ್ಠಾವಂತ ಬೆಂಬಲಿಗರ ಮುಂದೆ ಇನ್ಯಾರು ನಿಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ರಜಿನಿ ರಾಜಕೀಯ ಎಂಟ್ರಿ ಕುರಿತು ನಟ ಕಮಲ್‌ ಹಾಸನ್‌ ಹೇಳಿಕೆ ನೀಡಿದ್ದು, ರಜಿನಿ ರಾಜಕೀಯ ಪ್ರವೇಶ ವಿಚಾರ ಸಂತೋಷ ತಂದಿದೆ. ಸಹೋದರ ರಜನೀಕಾಂತ್‌ ಅವರ ಸಾಮಾಜಿಕ ಪ್ರಜ್ಞೆ ಬಗ್ಗೆ ನನಗೆ ತಿಳಿದಿದೆ. ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಟ್ವೀಟ್‌ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com