ಹೊಸ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ಇನ್ಮುಂದೆ ವಾರಕ್ಕೆರಡು ರಜೆ…??

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೊಂದು ಸಿಹಿಸುದ್ದಿ. ವಾರದಲ್ಲಿ ಆರು ದಿನ ದುಡಿದು ದಣಿದಿರುವ ನೌಕರರಿಗೆ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿರುವಂತೆ ರಾಜ್ಯದಲ್ಲಿಯೂ ಐದು ದಿನ ಕೆಲಸ ಹಾಗೂ ಎರಡು ದಿನದ ರಜಾ ಪದ್ದತಿ ಜಾರಿಗೆ ಬರುವ ಸಾಧ್ಯತೆ ಇದೆ.

ಸರ್ಕಾರಿ ನೌಕರರ ಸಂಘ 6ನೇ ವೇತನ ಆಯೋಗಕ್ಕೆ ಈ ಕುರಿತು ಮನವಿ ಮಾಡಿದ್ದು, 5 ದಿನ ಕೆಲಸ ಹಾಗೂ 2 ದಿನ ರಜೆ ಜಾರಿ ಕುರಿತಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಚಿಂತನೆ ನಡೆಸಿದೆ.

ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ರಜೆ ನೀಡುವುದು ಆಡಳಿತಕ್ಕೆ ಉತ್ತಮವೆಂದು ಮನವರಿಕೆಯಾಗಿದ್ದು, ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದಲ್ಲಿ ಸರ್ಕಾರಿ ನೌಕರರು ಸಹ ಐಟಿ ಬಿಟಿ ಕಂಪನಿಯವರಂತೆ ವಾರದಲ್ಲಿ 2 ದಿನ ರಜೆ ಪಡೆಯಲಿದ್ದಾರೆ.

ಈಗಾಗಲೆ ವಾರದಲ್ಲಿ ಎರಡು ದಿನ ರಜಾ ಪದ್ದತಿ ಅನೇಕ ರಾಜ್ಯಗಳಲ್ಲಿ ಜಾರಿಯಲ್ಲಿದ್ದು, ಕರ್ನಾಟಕದಲ್ಲೂ ಈ ಯೋಜನೆ ಜಾರಿಗ ತರಲು ಸರ್ಕಾರ ಒಪ್ಪಿಗೆ ನೀಡಬೇಕಿದೆ.

 

Leave a Reply

Your email address will not be published.

Social Media Auto Publish Powered By : XYZScripts.com