ನಾನು ಹೇಡಿಯಲ್ಲ, ನೀವು ತೊಡೆತಟ್ಟಿ ನಿಂತರೆ ರಾಜಕೀಯಕ್ಕೆ ಎಂಟ್ರಿ ಕೊಡ್ತೇನೆ : ಪ್ರಕಾಶ್‌ ರೈ

ಬೆಂಗಳೂರು ; ನಾನು ಹೇಡಿಯಲ್ಲ. ಪದೇ ಪದೇ ತೊಡೆ ತಟ್ಟಿದರೆ ಕರೆದರೆ ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆ. ಅದೊಂದು ದೊಡ್ಡ ವಿಷಯ ಎನಿಸುವುದಿಲ್ಲ ಎಂದು ನಟ ಪ್ರಕಾಶ್ ರೈ ಗುಡುಗಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಕಾಶ್‌ ರೈ, ಪರೋಕ್ಷವಾಗಿ ಬಿಜೆಪಿ ವಿರುದ್ದ ಗುಡುಗಿದ್ದಾರೆ. ರಾಜಕೀಯಕ್ಕೆ ಬರುವ ಆಸೆ ನನಗಿಲ್ಲ. ಆದರೆ ನನ್ನ ಮುಂದೆ ಪದೇ ಪದೇ ತೊಡೆತಟ್ಟಿ ನಿಂತು ರಾಜಕೀಯಕ್ಕೆ ಕರೆದರೆ ನಾನು ಅದಕ್ಕೆ ಸರಿಯಾದ ಪ್ರತ್ಯುತ್ತರ ನೀಡುತ್ತೇನೆ. ಅದೇನು ದೊಡ್ಡ ವಿಚಾರ ಅಲ್ಲ. ಆದರೆ ನನಗೆ ಬರುವ ಆಸೆ ಇಲ್ಲ ಎಂದಿದ್ದಾರೆ.

ನಾನು ಹೇಡಿಯಾಗಲು ಬಯಸುವುದಿಲ್ಲ. ತಪ್ಪು ಎಂದು ಗೊತ್ತಿದ್ದೂ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ. ಬೆಂಗಳೂರಿನಲ್ಲಿ ಅಂತಹವರ ಬೇಳೆಕಾಳು ಬೇಯಲು ಬಿಡುವುದಿಲ್ಲ ಎಂದಿದ್ದಾರೆ.

 

Leave a Reply

Your email address will not be published.