VOTE FOR JOB : ರಾಜ್ಯದಲ್ಲಿ ಶುರುವಾಗ್ತಿದೆ ಯುವಜನತೆಯ ಹೊಸ ಆಂದೋಲನ

ಬೆಂಗಳೂರು : 50 ಲಕ್ಷ ಉದ್ಯೋಗ ಸೃಷ್ಠಿಗಾಗಿ  ರಾಜಕೀಯ ಆಂದೋಲನ ಪ್ರಾರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಉದ್ಯೋಗಕ್ಕೆ ಓಟು ಎಂಬ ಹೆಸರಿನಡಿ ಮನೆ ಮನೆ ಪ್ರಚಾರ ನಡೆಸುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಎದುರಿಸಬೇಕಾದದ್ದು ಯುವಜನರನ್ನುಎಂಬ ಘೋಷವಾಕ್ಯದಡಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.

ಪ್ರತೀ ಬಾರಿಯೂ ಚುನಾವಣಾ ಸಮಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಯುವಜನರಿಗೆ ಉದ್ಯೋಗದ ಭರವಸೆಗಳನ್ನು ನೀಡುತ್ತವೆ. ಅದರ ಆಧಾರದ ಮೇಲೆಯೇ ಓಟು ಪಡೆದು ಅಧಿಕಾರಕ್ಕೆ ಬಂದ ನಂತರ ಭರವಸೆಗಳನ್ನು ಈಡೇರಿಸದೆ ಮೋಸ ಮಾಡುತ್ತಿವೆ. ಆದರೆ ಈ ಬಾರಿ ಆ ರೀತಿ ಆಗಲು ಬಿಡಬಾರದು ಎಂಬ ಉದ್ದೇಶದಿಂದ, ಯುವಜನರಿಗೆ ಉದ್ಯೋಗ ಕಲ್ಪಿಸಿಕೊಡುವ ಪಕ್ಷಕ್ಕೆ ಮಾತ್ರ ಮತ ಹಾಕುವುದಾಗಿ ಉದ್ಯೋಗಕ್ಕಾಗಿ ಯುವಜನರು ವೇದಿಕೆಯು ನಿರ್ಧರಿಸಿದ್ದು, ನೋ ಜಾಬ್‌ ನೋ ವೋಟ್‌, ಉದ್ಯೋಗಕ್ಕೆ ಓಟು ಎಂಬ ಆಂದೋಲನ ಆರಂಭಿಸಿದೆ.

ಇದಕ್ಕಾಗಿ ಈಗಾಗಲೆ 30 ಜಿಲ್ಲೆಗಳಲ್ಲಿ ಕಾರ್ಯಕರ್ತರ ನೋಂದಾವಣಿಯಾಗಿದ್ದು., 21 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ತಂಡಗಳೂ ರಚನೆಯಾಗಿವೆ. 100 ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ 10 ಸಾವಿರ ಮತದಾರರ ಓಟ್‌ ಬ್ಯಾಂಕ್ ನಿರ್ಮಿಸಲು ನಿರ್ಧರಿಸಿದ್ದು. ಈ ವಿಧಾನಸಭಾ ಕ್ಷೇತ್ರದ ಮನೆ ಮನೆ ಪ್ರಚಾರಕ್ಕೆ ಡಿಸೆಂಬರ್‌ 31ರಿಂದ ಚಾಲನೆ ನೀಡಲಿದೆ.

ಫೆಬ್ರವರಿ 18 ರಂದು ಬೆಂಗಳೂರಿನಲ್ಲಿ ನಡೆಯುವ ಯುವ ಅಧಿವೇಶನದಲ್ಲಿ ಮೂರು ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ನೋಡಿಕೊಂಡು ಯಾರಿಗೆ ಮತ ಚಲಾಯಿಸಬೇಕು ಎಂದು ನಿರ್ಧಾರ ಮಾಡುವುದಾಗಿ ಆಂದೋಲನದ ಮುಖ್ಯಸ್ಥರು ಹೇಳಿದ್ದಾರೆ.

 

Leave a Reply

Your email address will not be published.