ಹೊಸ ವರ್ಷಕ್ಕೆ BSNL ಗ್ರಾಹಕರಿಗೊಂದು ಶಾಕಿಂಗ್‌ ನ್ಯೂಸ್‌…..ಏನದು ?

ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಎಲ್ಲರೂ ಗ್ರಾಹಕರಿಗೆ ಆಫರ್‌ಗಳನ್ನು ನೀಡಿದರೆ ಸರ್ಕಾರಿ ಸ್ವಾಮ್ಯದ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್‌ ಒಂದನ್ನು ನೀಡಿದೆ.

ಹೌದು ಬಿಎಸ್‌ಎನ್‌ಎಲ್‌ ಉಚಿತ ಕರೆ ಅವಧಿಯನ್ನು ಕಡಿತ ಮಾಡಿದ್ದು, ರಾತ್ರಿಯಿಂದ ಬೆಳಗ್ಗೆವರೆಗೆ ನೀಡಲಾಗಿದ್ದ ಉಚಿತ ಕರೆ ಅವಧಿಯಲ್ಲಿ ಎರಡೂವರೆ ಗಟೆಕಡಿತ ಮಾಡಲಾಗಿದೆ. ಜನವರಿ 1ರಿಂದ ಈ ಪ್ಲಾನ್ ಜಾರಿಗೆ ಬರಲಿದೆ.

ಇಷ್ಟು ದಿನ ರಾತ್ರಿ 9ರಿಂದ ಬೆಳಗ್ಗೆ 7ಗಂಟೆ ವರೆಗೆ ಬಿಎಸ್‌ಎನ್‌ಎಲ್‌, ಲ್ಯಾಂಡ್‌ಲೈನ್‌, ಬ್ರಾಡ್‌ ಬ್ಯಾಂಡ್‌, ಕಾಂಬೋ, ಎಫ್‌ಟಿಟಿಎಚ್‌ ಗ್ರಾಹಕರಿಗೆ ಉಚಿತವಾಗಿ ಕರ ಮಾಡುವ ಸೌಲಭ್ಯ ನೀಡಿತ್ತು. ಆದರೆ ಈ ಅವಧಿಯನ್ನು ಹೊಸ ವರ್ಷದಿಂದ ಕಡಿತ ಮಾಡಲಿದೆ. ರಾತ್ರಿ 10.30ರಿಂದ ಬೆಳಗ್ಗೆ 6ಗಂಟೆವರೆಗೆ ಉಚಿತವಾಗಿ ಕರೆ ಮಾಡಬಹುದು.

Leave a Reply

Your email address will not be published.

Social Media Auto Publish Powered By : XYZScripts.com